ಎಲೆಕ್ಟ್ರಾನಿಕ್‌ ಸಮರ ಕಲೆ ನಿಪುಣ ದಿನೇಶ್‌ ನೌಕಾಪಡೆಯ ಮುಖ್ಯಸ್ಥ

| Published : May 01 2024, 01:22 AM IST

ಎಲೆಕ್ಟ್ರಾನಿಕ್‌ ಸಮರ ಕಲೆ ನಿಪುಣ ದಿನೇಶ್‌ ನೌಕಾಪಡೆಯ ಮುಖ್ಯಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರ ಸ್ವೀಕರಿಸಿದ 4 ದಶಕಗಳ ಸುದೀರ್ಘ ಅನುಭವಿ ದಿನೇಶ್‌ ಕುಮಾರ್‌ ತ್ರಿಪಾಠಿ ನೌಕಾಪಡೆಯನ್ನು ಆತ್ಮನಿರ್ಭರತೆಯತ್ತ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಅಡ್ಮಿರಲ್‌ ದಿನೇಶ್‌ ಕುಮಾರ್‌ ತ್ರಿಪಾಠಿ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಅಡ್ಮಿರಲ್‌ ಹರಿಕುಮಾರ್‌ ನಿವೃತ್ತಿಯ ಹಿನ್ನೆಲೆಯಲ್ಲಿ ನೂತ ಮುಖ್ಯಸ್ಥರ ನೇಮಕ ಮಾಡಲಾಗಿದೆ.

ಸಂವಹನ ಮತ್ತು ಎಲೆಕ್ಟ್ರಾನಿಕ್‌ ಸಮರ ಕಲೆಯಲ್ಲಿ ನಿಪುಣರಾಗಿರುವ ತ್ರಿಪಾಠಿ, ಇದುವರೆಗೂ ನೌಕಾಪಡೆಯಲ್ಲಿ ಸಿಬ್ಬಂದಿಗಳ ಸಹ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಅತಿವಿಶಿಷ್ಠ ಸೇವಾ ಪದಕ, ನೌ ಸೇನಾ ಪದಕ ಸೇರಿ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ನೌಕಾಪಡೆಯ 26ನೇ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ತ್ರಿಪಾಠಿ, ‘ನೌಕಾಪಡೆಯನ್ನು ಆತ್ಮನಿರ್ಭರತೆಯತ್ತ ಕೊಂಡೊಯ್ದು ವಿಕಸಿತ ಭಾರತವಾಗುವ ನಿಟ್ಟಿನಲ್ಲಿ ಆಮೂಲಾಗ್ರ ಕೊಡುಗೆ ನೀಡುವ ಗುರಿಯಿದೆ’ ಎಂದು ಹೇಳಿದರು.

ಮಧ್ಯಪ್ರಾಚ್ಯದ ಸಮುದ್ರಗಳಲ್ಲಿ ಹೌತಿಗಳ ಉಗ್ರಕೃತ್ಯ ತಡೆ, ಹಿಂದೂ ಮಹಾಸಾಗರದಲ್ಲಿ ಚೀನಾ ಪಾರಮ್ಯವನ್ನು ಹತ್ತಿಕ್ಕುವ ಸವಾಲು ತ್ರಿಪಾಠಿ ಅವರ ಮುಂದಿದೆ.