ಡಿಎಂಕೆ ಮುಖವಾಣಿ ಮುರಸೋಳಿ ವರದಿ ಮಾಡಿದ್ದು, ಪ್ರಧಾನಿ ಮೋದಿ ಎನ್‌ಡಿಎ ಸಭೆಯಲ್ಲಿ ಕಣ್ಣನ್ನು ತೇವ ಮಾಡಿಕೊಂಡಿದ್ದಾಗಿ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಚೆನ್ನೈ: ‘ದ್ರಾವಿಡ ನೆಲ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಬೇಕು ಎನ್ನುವ ಆಸೆಯಿಂದ ಇನ್ನಿಲ್ಲದ ಕಸರತ್ತು ಮಾಡಿತ್ತು. ಆದರೆ ಇದು ಕೈಗೂಡಿರಲ್ಲಿಲ್ಲ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ಮಾಡಿಕೊಂಡಿದ್ದು, ಇತ್ತೀಚಿಗೆ ನಡೆದ ಎನ್‌ಡಿಎ ಕೂಟದ ಸಂಸದರ ಸಭೆಯಲ್ಲಿ ಕಣ್ಣೀರು ಹಾಕಿದರು’ ಎಂದು ಡಿಎಂಕೆ ಮುಖವಾಣಿ ‘ಮುರಸೋಳಿ’ ಸೋಮವಾರ ವರದಿ ಮಾಡಿದೆ.

‘ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಮೋದಿ ಕಣ್ಣೀರು ಹಾಕಿದರು ಆದರೆ ತಾವು ಏಕೆ ಜಯಗಳಿಸಲಿಲ್ಲ ಎಂಬ ಬಗ್ಗೆ ಹೇಳಿಕೊಂಡಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಅವರು ಅರಿತುಕೊಂಡಂತೆ ಕಾಣುತ್ತಿಲ್ಲ. ಒಂದು ವೇಳೆ ಸೋಲಿಗೆ ನಿಜವಾದ ಕಾರಣದ ಸತ್ಯದ ಅರಿವಾಗಿದ್ದರೂ ಕೂಡ ಅವರು ಅದನ್ನು ಬಹಿರಂಗಪಡಿಸುವುದಕ್ಕೆ ಸಾಧ್ಯವಾಗಲಿಲ್ಲ’ ಎಂದು ಮುರಸೋಳಿ ತನ್ನ ಸಂಪಾದಕೀಯದಲ್ಲಿ ಜೂನ್‌ 17 ರಂದು ಪ್ರಕಟಿಸಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಕೂಟ ಎಲ್ಲ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎನ್‌ಡಿಎ ಕನಸು ಛಿದ್ರ ಮಾಡಿದೆ.