ಸಾರಾಂಶ
ಅಮಾವಾಸ್ಯೆ ದಿನವಾದ ಶುಕ್ರವಾರ ರಾತ್ರಿ ಆಕಾಶದಲ್ಲಿ ‘ಗ್ರಹ ಮೆರವಣಿಗೆ’ ಎಂದು ಕರೆಯಲ್ಪಡುವ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಭಾರತದಿಂದ ಸೌರವ್ಯೂಹದ ಎಲ್ಲಾ 7 ಗ್ರಹಗಳು ಕಾಣಿಸಲಿದ್ದು, ಇವು ಒಂದೇ ಸಾಲಿನಲ್ಲಿ ಜೋಡಿಸಿಕೊಳ್ಳಲಿವೆ.
ನವದೆಹಲಿ: ಅಮಾವಾಸ್ಯೆ ದಿನವಾದ ಶುಕ್ರವಾರ ರಾತ್ರಿ ಆಕಾಶದಲ್ಲಿ ‘ಗ್ರಹ ಮೆರವಣಿಗೆ’ ಎಂದು ಕರೆಯಲ್ಪಡುವ ಅಪರೂಪದ ಖಗೋಳ ವಿದ್ಯಮಾನವೊಂದು ಘಟಿಸಲಿದೆ. ಭಾರತದಿಂದ ಸೌರವ್ಯೂಹದ ಎಲ್ಲಾ 7 ಗ್ರಹಗಳು ಕಾಣಿಸಲಿದ್ದು, ಇವು ಒಂದೇ ಸಾಲಿನಲ್ಲಿ ಜೋಡಿಸಿಕೊಳ್ಳಲಿವೆ.
ಈ ವರ್ಷ ಜನವರಿಯಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ಗೋಚರತೆ ಆರಂಭವಾಯಿತು. ಫೆಬ್ರವರಿಯಲ್ಲಿ ಇವುಗಳ ಸಾಲಿಗೆ ಬುಧಗ್ರಹವೂ ಸೇರಿದ್ದು, ಫೆ.28ರಂದು ಎಲ್ಲಾ 7 ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಜೋಡಿಸಲ್ಪಡುತ್ತವೆ. ಶುಕ್ರವಾರ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕ್ಯುಲರ್ ಅಗತ್ಯ. ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮೊದಲು ವೀಕ್ಷಣೆಗೆ ಉತ್ತಮ ಸಮಯ.ಖಗೋಳ ಶಾಸ್ತ್ರಜ್ಞರ ಪ್ರಕಾರ, 2025ರ ಆಗಸ್ಟ್ ಮಧ್ಯಭಾಗದಲ್ಲಿ ಹಗಲಿನ ವೇಳೆ ಇದೇ ರೀತಿ ದೃಶ್ಯವನ್ನು ನೋಡಲು ಮತ್ತೊಂದು ಅವಕಾಶ ಸಿಗಲಿದೆ. ಆಗ ಆಕಾಶದಲ್ಲಿ 6 ಗ್ರಹಗಳು ಗೋಚರಿಸಲಿವೆ.