ಸಾರಾಂಶ
 ಡಿಎಂಕೆ ಪಕ್ಷದ ಕಾರ್ಯಕರ್ತರು ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರ ಧರಿಸಕೂಡದು ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಎ. ರಾಜಾ ವಿವಾದಾತ್ಮಕ ಸಲಹೆ ನೀಡಿದ್ದಾರೆ. 
ಚೆನ್ನೈ: ಡಿಎಂಕೆ ಪಕ್ಷದ ಕಾರ್ಯಕರ್ತರು ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರ ಧರಿಸಕೂಡದು ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಎ. ರಾಜಾ ವಿವಾದಾತ್ಮಕ ಸಲಹೆ ನೀಡಿದ್ದಾರೆ.
ನೀಲಗಿರಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಡಿಎಂಕೆ ಕಾರ್ಯಕರ್ತರು ಸಂಘಿಗಳಂತೆ (ಆರ್‌ಎಸ್‌ಎಸ್ ಸ್ವಯಂಸೇವಕರು) ವೇಷಭೂಷಣ ಧರಿಸಬಾರದು. ಹಣೆಗೆ ಕುಂಕುಮ ಹಾಗೂ ಕೈಗೆ ಪವಿತ್ರ ದಾರವನ್ನು ಸಂಘಿಗಳು ಧರಿಸುತ್ತಾರೆ. ಇದರಿಂದ ಅವರು ಮತ್ತು ನಿಮ್ಮನ್ನು ಗುರುತು ಹಿಡಿಯುವುದು ಕಷ್ಟವಾಗುತ್ತದೆ. ಕನಿಷ್ಠ ಪಕ್ಷ ವಿದ್ಯಾರ್ಥಿ ಕಾರ್ಯಕರ್ತರಾದರೂ ಕುಂಕುಮ ತೆಗೆಯಿರಿ. ನಿಮ್ಮ ಪೋಷಕರು ನಿಮ್ಮ ಹಣೆಯ ಮೇಲೆ ವಿಭೂತಿಯನ್ನು ಇಟ್ಟರೆ, ಅದನ್ನು ಇಟ್ಟುಕೊಳ್ಳಿ. ಆದರೆ ಡಿಎಂಕೆ ಧೋತಿ ಧರಿಸಿದ ನಂತರ ಅಥವಾ ಪಕ್ಷದ ಕಾರ್ಯಕ್ರಮಕ್ಕೆ ಬಂದಾಗ ಅದನ್ನು ತೆಗೆದುಹಾಕಿ’ ಎಂದು ಮನವಿ ಮಾಡಿದ್ದಾರೆ.
ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಗುರಿಯಾಗಿದೆ.

;Resize=(128,128))
;Resize=(128,128))
;Resize=(128,128))
;Resize=(128,128))