ನಿಷೇಧಿತ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ನವದೆಹಲಿ : ನಿಷೇಧಿತ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ತಮ್ಮ ನ್ಯಾಯಾಂಗ ಬಂಧನ ಪ್ರಶ್ನಿಸಿ ರಾಂಕಾ ಹಾಗೂ ದಾಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ। ಸುಬ್ರಮಣಿಯಂ ಪ್ರಸಾದ್, ‘ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದಿಂದ ಮುಕ್ತಗೊಳಿಸಿದ ದಿನವೇ (ಅ.11) ಶಾಂತಿ ಕಾಪಾಡುವ ಬಾಂಡ್ ನೀಡಿದ್ದರೂ, ಮರುದಿನವೇ ಗೇಟ್ ಹಾಗೂ ಬ್ಯಾರಿಕೇಡ್ ದಾಟಿ ಅಕ್ರಮವಾಗಿ ಒಳನುಗ್ಗಲು ಯತ್ನಿಸಿದ್ದೀರಿ. ಬ್ಯಾರಿಕೇಡ್ಗಳನ್ನು ಸುಮ್ಮನೆ ನಿಲ್ಲಿಸಿರುವುದಿಲ್ಲ, ಅವುಗಳಿಗೊಂದು ಉದ್ದೇಶವಿರುತ್ತದೆ’ ಎಂದರು.
ಇದೇ ವೇಳೆ, ಜಾಗತಿಕವಾಗಿ ವಿದ್ಯಾರ್ಥಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದನ್ನು ಎಚ್ಚರಿಕೆಯ ಉದಾಹರಣೆಯಾಗಿ ನೀಡಿದ ನ್ಯಾ। ಪ್ರಸಾದ್. ‘ನಮ್ಮ ದೇಶದ ಹೊರಗೆ ಇದು ನಡೆವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳ ಪ್ರತಿಭಟನೆ ಹೆಸರಲ್ಲಿ ಶುರುವಾದ ಹೋರಾಟ ನಂತರ ಬೆಂಕಿ ಮತ್ತು ಕಟ್ಟಡ ಸುಡುವುದರೊಂದಿಗೆ ಬದಲಾಯಿತು’ ಎಂದು ಕಿಡಿಕಾರಿದರು.
ನೀವು ಜೆನ್-ಝಝೀ ಅಲ್ಲ:
ವಿಚಾರಣೆ ನಡೆವಾಗ ಜಡ್ಜ್, ಇಬ್ಬರು ನಾಯಕರ ವಯಸ್ಸು ಎಷ್ಟು ಎಂದು ಪ್ರಶ್ನಿಸಿದರು. ಅವರ ಪರ ವಕೀಲರು, ದಾಸ್ಗೆ 27 ವರ್ಷ ಮತ್ತುರಾಂಕಾಗೆ 31 ಎಂದರು. ಇದನ್ನು ಗಮನಿಸಿದ ನ್ಯಾ। ಪ್ರಸಾದ್, ‘1997ರ ನಂತರ ಜನಿಸಿದವರನ್ನು ಸಾಮಾನ್ಯವಾಗಿ ‘ಜೆನ್ ಝೀ’ (Gen Z) ಎಂದು ಕರೆಯಲಾಗುತ್ತದೆ. ಹಾಗಿದ್ದರೆ ನೀವು ಜೆನ್ ಝೀ ಪೀಳಿಗೆಗೆ ಸೇರುವುದಿಲ್ಲ, ನೀವು ಯಾರು?’ ಎಂದು ಲಘು ದಾಟಿಯಲ್ಲಿ ಚಾಟಿ ಬೀಸಿದರು. ಆಗ ವಕೀಲರು, ‘ಇವರು ಜೆನ್ಝೀಗೆ ಸ್ಫೂರ್ತಿ’ ಎದಂರು.
ಅರ್ಜಿ ವಾಪಸ್ ಪಡೆದ ನಾಯಕರು:
ವಿಶೇಷ ಮ್ಯಾಜಿಸ್ಟ್ರೇಟ್ ಮುಂದೆ ಈಗಾಗಲೇ ವಿಚಾರಣೆ ಬಾಕಿ ಇರುವಾಗ, ನೇರವಾಗಿ ಹೈಕೋರ್ಟ್ಗೆ ಏಕೆ ಬಂದಿದ್ದೀರಿ ಎಂದು ಪೀಠವು ತಾಂತ್ರಿಕ ಅಂಶಗಳನ್ನು ಎತ್ತಿ ದಾಸ್, ರಾಂಕಾರನ್ನು ಪ್ರಶ್ನಿಸಿತು. ಕೊನೆಗೆ ಇಬ್ಬರೂ ತಮ್ಮ ಅರ್ಜಿಯನ್ನು ಹಿಂಪಡೆದರು.

