ಗೋವಾ ಪಬ್ ಮಾದರಿಯಲ್ಲೇ ಸ್ವಿಜರ್ಲೆಂಡಲ್ಲಿ ರೆಸಾರ್ಟ್‌ವೊಂದರ ಬಾರ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭಾರೀ ಸ್ಫೋಟ-ಬೆಂಕಿ ಅವಘಡದಲ್ಲಿ 40 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
- ಹೊಸ ವರ್ಷದ ಸಂಭ್ರಮದ ವೇಳೆ ದುರಂತ
ಕ್ರಾನ್ಸ್-ಮೊಂಟಾನ: ಗೋವಾ ಪಬ್ ಮಾದರಿಯಲ್ಲೇ ಸ್ವಿಜರ್ಲೆಂಡಲ್ಲಿ ರೆಸಾರ್ಟ್‌ವೊಂದರ ಬಾರ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭಾರೀ ಸ್ಫೋಟ-ಬೆಂಕಿ ಅವಘಡದಲ್ಲಿ 40 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಕ್ರಾನ್ಸ್-ಮೊಂಟಾನಾ ಪಟ್ಟಣದ ಲೆ ಕಾನ್ಸ್ಟೆಲೇಷನ್ ಬಾರ್‌ನ ಬೇಸ್‌ಮೆಂಟ್‌ನಲ್ಲಿ ಈ ಸ್ಫೋಟ ಸಂಭವಿಸಿದ್ದು, ಆ ಬಳಿಕ ವ್ಯಾಪಿಸಿದ ಬೆಂಕಿಯಿಂದಾಗಿ 40ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ವೇಳೆ ಬಾರ್‌ನಲ್ಲಿ 150ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಹೇಳಲಾಗಿದೆ.
ಸದ್ಯಕ್ಕೆ ದುರಂತಕ್ಕೆ ಕಾರಣ ಏನೆಂಬುದು ಪತ್ತೆಯಾಗಿಲ್ಲ. ಆದರೆ, ಭಯೋತ್ಪಾದನೆಯ ಸಾಧ್ಯತೆ ತಳ್ಳಿಹಾಕಲಾಗಿದೆ. ತಜ್ಞರಿಗೆ ಇನ್ನೂ ದುರಂತಕ್ಕೀಡಾದ ಬಾರ್‌ನೊಳಗೆ ತೆರಳಲು ಅಸಾಧ್ಯವಾಗಿದ್ದು, ಅವರು ಸ್ಥಳ ಪರಿಶೀಲಿಸಿದ ಬಳಿಕ ದುರಂತಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗೋವಾದ ಪಬ್‌ವೊಂದರಲ್ಲಿ ಡಿ.6ರಂದು ಸಂಭವಿಸಿದ್ದ ಬೆಂಕಿ ಅವಘಡದಲ್ಲಿ 25 ಮಂದಿ ಸಾವಿಗೀಡಾಗಿದ್ದರು.