-ಬೆಲ್ಜಿಯಂನಲ್ಲಿ 19ನೇ ಶತಮಾನದ ಚಿನ್ನದ ಗಟ್ಟಿ, ನಗದು ಪತ್ತೆಬ್ರಸೆಲ್ಸ್‌: ಚರಂಡಿಗೆ ಕೊಳವೆ ಅಳವಡಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 98 ಕೋಟಿ ರು. ಮೌಲ್ಯದ ಅಪಾರ ಪ್ರಮಾಣದ ಚಿನ್ನದ ಗಟ್ಟಿಗಳು ಹಾಗೂ ಅಪರೂಪದ ನಾಣ್ಯಗಳ ಬೃಹತ್‌ ನಿಧಿ ಪತ್ತೆಯಾದ ಘಟನೆ ಬೆಲ್ಜಿಯಂನ ಸಿಂಟ್ ಗಿಲಿಸ್ಡೆಂಡರ್‌ಮೊಂಡೆ ಎಂಬ ಪ್ರದೇಶದಲ್ಲಿ ನಡೆದಿದೆ.

ಕೋಬೆ ಎಂಬ 18 ವರ್ಷದ ವಿದ್ಯಾರ್ಥಿ ಬೇಸಿಗೆ ರಜೆಯಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದ. ಈ ವೇಳೆ ಭೂಗರ್ಭದಲ್ಲಿ ಬಚ್ಚಿಡಲಾಗಿದ್ದ ಈ ನಿಧಿಯನ್ನು ಗುರುತಿಸಿದ್ದಾನೆ. 19ನೇ ಶತಮಾನದ ಭವ್ಯ ಬಂಗಲೆಯೊಂದರ ನೆಲಮಾಳಿಗೆಯಲ್ಲಿ, ಇಟ್ಟಿಗೆ ಗೋಡೆಯೊಳಗೆ ಚೀಲವೊಂದರಲ್ಲಿ ಈ ನಿಧಿಯನ್ನು ಅತ್ಯಂತ ಜಾಗರೂಕತೆಯಿಂದ ಬಚ್ಚಿಡಲಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ಜಾಗವನ್ನು ವಶಕ್ಕೆ ಪಡೆದು, ನಿಧಿಯನ್ನು ಬ್ರಸೆಲ್ಸ್‌ನ ಭದ್ರತಾ ಘಟಕಕ್ಕೆ ರವಾನಿಸಿದ್ದಾರೆ. ಬೆಲ್ಜಿಯಂ ಕಾನೂನಿನ ಪ್ರಕಾರ, ಈ ನಿಧಿಯ ನಿಜವಾದ ವಾರಸುದಾರರನ್ನು ಪತ್ತೆಹಚ್ಚಲು ಕನಿಷ್ಠ 5 ವರ್ಷಗಳ ಕಾಲ ತನಿಖೆ ನಡೆಯಲಿದೆ.