ಮೊದಲು ಮತ ಹಾಕಿ ಸರ್ಟಿಫಿಕೇಟ್‌ ಪಡೆದ ಜೈಶಂಕರ್‌!

| Published : May 26 2024, 01:30 AM IST / Updated: May 26 2024, 05:14 AM IST

ಸಾರಾಂಶ

6ನೇ ಹಂತದ ಚುನಾವಣೆಯಲ್ಲಿ ಇಲ್ಲಿನ ಮತಗಟ್ಟೆಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್‌ ಮೊದಲ ಮತದಾನ ಮಾಡುವ ಮೂಲಕ ‘ಮೊದಲ ಪುರುಷ ಮತದಾರ’ ಎಂಬ ಪ್ರಮಾಣಪತ್ರವನ್ನು ಪಡೆದರು.

ನವದೆಹಲಿ: 6ನೇ ಹಂತದ ಚುನಾವಣೆಯಲ್ಲಿ ಇಲ್ಲಿನ ಮತಗಟ್ಟೆಯಲ್ಲಿ ವಿದೇಶಾಂಗ ಸಚಿವ ಜೈ ಶಂಕರ್‌ ಮೊದಲ ಮತದಾನ ಮಾಡುವ ಮೂಲಕ ‘ಮೊದಲ ಪುರುಷ ಮತದಾರ’ ಎಂಬ ಪ್ರಮಾಣಪತ್ರವನ್ನು ಪಡೆದರು.

ಅದೇ ರೀತಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಮೊದಲ ಮತ ಹಾಕುವ ಮೂಲಕ ‘ಮೊದಲ ಹಿರಿಯ ನಾಗರಿಕ ಮತದಾರ’ ಎಂಬ ಪ್ರಮಾಣ ಪತ್ರವನ್ನು ಪಡೆದರು.

ಈ ಬಗ್ಗೆ ಜೈ ಶಂಕರ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ‘ನಾನು ಮೊದಲ ಮತ ಹಾಕಿದ್ದರಿಂದ ನನಗೆ ಮೊದಲ ಪುರುಷ ಮತದಾರ ಎಂಬ ಪ್ರಮಾಣ ಪತ್ರವನ್ನು ನೀಡಿದ್ದಾರೆ’ ಎಂದು ಫೋಟೊ ಸಮೇತ ಹಂಚಿಕೊಂಡಿದ್ದಾರೆ.

ಆಯಾ ಮತಗಟ್ಟೆಯ ಮೊದಲ ಮತದಾರರಿಗೆ ‘ಮೊದಲ ಮತದಾರ’ ಎಂಬ ಪ್ರಮಾಣಪತ್ರ ಕೊಡುವ ಪದ್ಧತಿ ಇದೆ.