ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ : ಜೆಲೆನ್ಸ್ಕಿಗೆ ಮೋದಿ ಹಾರೈಕೆ

| N/A | Published : Aug 17 2025, 01:41 AM IST

ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ : ಜೆಲೆನ್ಸ್ಕಿಗೆ ಮೋದಿ ಹಾರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

 ಉಕ್ರೇನ್ ಅಧ್ಯಕ್ಷ ವೊಲೊಮಿರ್‌ ಜೆಲೆನ್ಸ್ಕಿರಷ್ಯಾ ಜತೆಗಿನ ಯುದ್ಧ ತಣಿಸಲು ಭಾರತ ಶ್ರಮಿಸಬೇಕು ಎಂದು ಕೋರಿದ್ದರು. ಇದಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಕ್ರೇನಿ ಅಧ್ಯಕ್ಷರಿಗೆ ಧನ್ಯವಾದ ಹೇಳಿ ಉಕ್ರೇನ್ ಜನತೆಯ ಶಾಂತಿಗೆ ಹಾರೈಸುತ್ತೇನೆ ಎಂದಿದ್ದಾರೆ.

 ನವದೆಹಲಿ :  ಭಾರತದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಹೇಳಿ ಉಕ್ರೇನ್ ಅಧ್ಯಕ್ಷ ವೊಲೊಮಿರ್‌ ಜೆಲೆನ್ಸ್ಕಿರಷ್ಯಾ ಜತೆಗಿನ ಯುದ್ಧ ತಣಿಸಲು ಭಾರತ ಶ್ರಮಿಸಬೇಕು ಎಂದು ಕೋರಿದ್ದರು. ಇದಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಕ್ರೇನಿ ಅಧ್ಯಕ್ಷರಿಗೆ ಧನ್ಯವಾದ ಹೇಳಿ ಉಕ್ರೇನ್ ಜನತೆಯ ಶಾಂತಿಗೆ ಹಾರೈಸುತ್ತೇನೆ ಎಂದಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ , ‘ಭಾರತ ಮತ್ತು ಉಕ್ರೇನ್ ನಡುವೆ ಸಂಬಂಧ ವೃದ್ಧಿಯ ಬದ್ಧತೆ ಗೌರವಿಸುತ್ತೇನೆ. ಉಕ್ರೇನ್‌ನಲ್ಲಿರುವ ನಮ್ಮ ಸ್ನೇಹಿತರು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯಿಂದ ಗುರುತಿಸಲ್ಪಡಲಿ ಎಂದು ಪ್ರಾಮಾಣಿಕವಾಗಿ ಹಾರೈಸುವೆ’ ಎಂದಿದ್ದಾರೆ.

ಟ್ರಂಪ್-ಪುಟಿನ್ ಭೇಟಿ ಶಾಂತಿ ಸ್ಥಾಪನೆಗೆ ಸಹಕಾರಿ: ಭಾರತ

ನವದೆಹಲಿ: ಉಕ್ರೇನ್ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಅಲಾಸ್ಕಾದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ನಡೆಸಿದ ಮಾತುಕತೆಯನ್ನು ಭಾರತ ಸ್ವಾಗತಿಸಿದ್ದು, ‘ಶಾಂತಿ ಸ್ಥಾಪನೆಗೆ ಅವರಿಬ್ಬರ ನಾಯಕತ್ವ ಶ್ಲಾಘನೀಯ’ ಎಂದಿದೆ.ವಿದೇಶಾಂಗ ಇಲಾಖೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ ಟ್ರಂಪ್ ಮತ್ತು ಪುಟಿನ್ ನಡೆಸಿದ ಮಾತುಕತೆಯನ್ನು ಭಾರತ ಸ್ವಾಗತಿಸುತ್ತದೆ. ಶಾಂತಿ ಸ್ಥಾಪನೆಗಾಗಿ ಅವರಿಬ್ಬರೂ ಅನುಸರಿಸುತ್ತಿರುವ ನಾಯಕತ್ವ ಶ್ಲಾಘನೀಯ. ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಯನ್ನು ಭಾರತ ಮೆಚ್ಚುತ್ತದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮುಂದಿನ ದಾರಿ ಸಾಧ್ಯ, ಉಕ್ರೇನ್‌ನಲ್ಲಿನ ಸಂಘರ್ಷಕ್ಕೆ ಶೀಘ್ರ ಅಂತ್ಯ ಕಾಣಬೇಕೆಂದು ಭಾರತ ಬಯಸುತ್ತದೆ’ ಎಂದಿದೆ.

Read more Articles on