ಪಂಚರಾಜ್ಯ ಚುನಾವಣೆ ಮುಕ್ತಾಯ ಬೆನ್ನಲ್ಲೇ ಚುನಾವಣಾ ಆಯೋಗ ಮೂರನೇ ಹಂತದ ಮತಪಟ್ಟಿ ಪರಿಷ್ಕರಣೆಗೆ ಸಜ್ಜಾಗಿದೆ.ಕರ್ನಾಟಕ ಸೇರಿದಂತೆ ಬಾಕಿ ಉಳಿದಿರುವ 22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಪಟ್ಟಿ ಪರಿಷ್ಕರಣೆಗೆ ಆಯೋಗ ಸಿದ್ಧತೆ ನಡೆಸಿದೆ.
ನವದೆಹಲಿ: ಪಂಚರಾಜ್ಯ ಚುನಾವಣೆ ಮುಕ್ತಾಯ ಬೆನ್ನಲ್ಲೇ ಚುನಾವಣಾ ಆಯೋಗ ಮೂರನೇ ಹಂತದ ಮತಪಟ್ಟಿ ಪರಿಷ್ಕರಣೆಗೆ ಸಜ್ಜಾಗಿದೆ.
22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಪಟ್ಟಿ ಪರಿಷ್ಕರಣೆ
ಕರ್ನಾಟಕ ಸೇರಿದಂತೆ ಬಾಕಿ ಉಳಿದಿರುವ 22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತಪಟ್ಟಿ ಪರಿಷ್ಕರಣೆಗೆ ಆಯೋಗ ಸಿದ್ಧತೆ ನಡೆಸಿದೆ. ಇತ್ತೀಚಿಗೆ ಚುನಾವಣೆ ಎದುರಿಸಿದ ಅಸ್ಸಾಂ, ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ ಸೇರಿ 10 ರಾಜ್ಯಗಳಲ್ಲಿ ಮೊದಲೆರೆಡು ಹಂತಗಳಲ್ಲಿ ಮತಪಟ್ಟಿ ಪರಿಷ್ಕರಣೆ ನಡೆಸಿತ್ತು.
40 ಕೋಟಿ ಮತದಾರರು ಪರಿಷ್ಕರಣೆಗೆ
ಈಗ ಮೂರನೇ ಹಂತವಾಗಿ ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಜಮ್ಮುಕಾಶ್ಮೀರ, ಹರ್ಯಾಣ, ತೆಲಂಗಾಣ ಸೇರಿ 22 ರಾಜ್ಯಗಳಿಗೆ ನಡೆಯಲಿದೆ. ಇಲ್ಲಿ 40 ಕೋಟಿ ಮತದಾರರು ಪರಿಷ್ಕರಣೆಗೆ ಒಳಪಡಲಿದ್ದಾರೆ.
