ದೇಶದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ ಹ್ಯಾಕಿಂಗ್‌ ಆರೋಪ ಸುಳ್ಳು : ಚುನಾವಣಾ ಆಯೋಗ

| N/A | Published : Apr 12 2025, 12:46 AM IST / Updated: Apr 12 2025, 07:07 AM IST

ಸಾರಾಂಶ

ದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕಿಂಗ್‌ಗೆ ಒಳಪಡುತ್ತವೆ ಎನ್ನುವ ಆರೋಪವನ್ನು ಚುನಾವಣಾ ಆಯೋಗದ ಮೂಲಗಳು ನಿರಾಕರಿಸಿದ್ದು, ‘ಇವಿಎಂಗಳು ಇಂಟರ್ನೆಟ್‌ ಸಂಪರ್ಕವಿಲ್ಲದೆ ಸರಳ ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುತ್ತವೆ. ಹ್ಯಾಕಿಂಗ್ ಅಸಾಧ್ಯ’ ಎಂದಿವೆ.

ನವದೆಹಲಿ: ದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕಿಂಗ್‌ಗೆ ಒಳಪಡುತ್ತವೆ ಎನ್ನುವ ಆರೋಪವನ್ನು ಚುನಾವಣಾ ಆಯೋಗದ ಮೂಲಗಳು ನಿರಾಕರಿಸಿದ್ದು, ‘ಇವಿಎಂಗಳು ಇಂಟರ್ನೆಟ್‌ ಸಂಪರ್ಕವಿಲ್ಲದೆ ಸರಳ ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುತ್ತವೆ. ಹ್ಯಾಕಿಂಗ್ ಅಸಾಧ್ಯ’ ಎಂದಿವೆ.ಎಲೆಕ್ಟ್ರಾನಿಕ್ ಮತಯಂತ್ರಗಳು ಹ್ಯಾಕರ್‌ಗಳಿಗೆ ಗುರಿಯಾಗಬಹುದು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್‌ ಹೇಳದ್ದರು. ಈ ಬೆನ್ನಲ್ಲೇ ಭಾರತದ ಚುನಾವಣಾ ಆಯೋಗದ ಮೂಲಗಳು ತಮ್ಮ ದೇಶದ ಇವಿಎಂಗಳು ಸುರಕ್ಷಿತ ಎಂದಿವೆ.

‘ಭಾರತವು ಸರಳ, ಸರಿಯಾದ ಮತ್ತು ನಿಖರವಾದ ಕ್ಯಾಲ್ಕುಲೇಟರ್‌ಗಳಂತೆ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸುತ್ತದೆ. ಇಂಟರ್ನೆಟ್‌, ವೈಫೈ ಅಥವಾ ಇನ್ಫ್ರಾರೆಡ್‌ಗೆ ಈ ಇವಿಎಂಗಳನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಈ ಯಂತ್ರಗಳು ಸುಪ್ರೀಂ ಕೋರ್ಟ್‌ನಿಂದ ಕಾನೂನು ಪರಿಶೀಲನೆಗೆ ಒಳಗಾಗುತ್ತದೆ ಮತ್ತು ಮತದಾನ ಪ್ರಾರಂಭಕ್ಕೂ ಮುನ್ನ ಅಣಕು ಮತದಾನ ಸೇರಿದಂತೆ ವಿವಿಧ ಹಂತಗಳಲ್ಲಿ ರಾಜಕೀಯ ಪಕ್ಷಗಳಿಂದ ನಿರಂತರ ಪರಿಶಿಲನೆಗೆ ಒಳಪಡುತ್ತದೆ’ ಎಂದಿದೆ.