ಸಾರಾಂಶ
ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, ‘ಜನರಿಂದ ತಮ್ಮ ವಿರುದ್ಧ ಫಲಿತಾಂಶ ಬಂದದ್ದಕ್ಕಾಗಿ ಹೀಗೆ ಮಾನಹಾನಿ ಮಾಡುವುದು ಅಸಂಬದ್ಧ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ.
ನವದೆಹಲಿ : ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗದ ಮೂಲಗಳು, ‘ಜನರಿಂದ ತಮ್ಮ ವಿರುದ್ಧ ಫಲಿತಾಂಶ ಬಂದದ್ದಕ್ಕಾಗಿ ಹೀಗೆ ಮಾನಹಾನಿ ಮಾಡುವುದು ಅಸಂಬದ್ಧ’ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ.
‘ತಪ್ಪು ಮಾಹಿತಿ ಹರಡುವ ಕಾರಣ ಅವಿಶ್ರಾಂತವಾಗಿ ಶ್ರಮಿಸುವ ಲಕ್ಷಾಂತರ ಚುನಾವಣಾ ಸಿಬ್ಬಂದಿಯ ವರ್ಚಸ್ಸು ಕುಂದುತ್ತದೆ. ಇದಲ್ಲದೆ, ಚುನಾವಣೆಯ ಸಮಯದಲ್ಲಿ ಪಕ್ಷಗಳು ನೇಮಿಸಿದ ಮತಗಟ್ಟೆಗಳ ಪ್ರತಿನಿಧಿಗಳಿಗೂ ಅಪಖ್ಯಾತಿ ಬರುತ್ತದೆ.
ಮತದಾರರ ಪಟ್ಟಿಯ ವಿರುದ್ಧ ಆಧಾರರಹಿತ ಆರೋಪ ಮಾಡುವುದು ಕಾನೂನಿನ ನಿಯಮಕ್ಕೆ ಅವಮಾನ. ಮತದಾನದ ಪ್ರಮಾಣದಲ್ಲಿ ಅಸಹಜ ಏರಿಕೆ ಆಗಿದೆ ಎಂಬ ಆರೋಪದಲ್ಲೂ ಹುರುಳಿಲ್ಲ’ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.