ಆರ್ಥಿಕ ಪ್ರಗತಿಯೊಂದೇ ವಿಶ್ವಗುರು ಆಗಲು ಮಾನದಂಡವಲ್ಲ : ಭಾಗ್ವತ್‌

| N/A | Published : Aug 10 2025, 01:30 AM IST / Updated: Aug 10 2025, 05:07 AM IST

ಆರ್ಥಿಕ ಪ್ರಗತಿಯೊಂದೇ ವಿಶ್ವಗುರು ಆಗಲು ಮಾನದಂಡವಲ್ಲ : ಭಾಗ್ವತ್‌
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕತೆಯಲ್ಲಿ ಬಲಿಷ್ಠವಾಗುತ್ತಿರುವ ಭಾರತ, ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ ಎಂಬ ಹೆಮ್ಮೆಯ ಮಾತುಗಳ ನಡುವೆಯೇ, ‘ಭಾರತ ಕೇವಲ ಆರ್ಥಿಕತೆಯಿಂದ ವಿಶ್ವಗುರುವಾಗಲು ಸಾಧ್ಯವಿಲ್ಲ, ಧರ್ಮ ಮತ್ತು ಅಧ್ಯಾತ್ಮದ ಬೆಳವಣಿಗೆಯೂ ಅಗತ್ಯ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ 

 ನಾಗ್ಪುರ : ಆರ್ಥಿಕತೆಯಲ್ಲಿ ಬಲಿಷ್ಠವಾಗುತ್ತಿರುವ ಭಾರತ, ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ ಎಂಬ ಹೆಮ್ಮೆಯ ಮಾತುಗಳ ನಡುವೆಯೇ, ‘ಭಾರತ ಕೇವಲ ಆರ್ಥಿಕತೆಯಿಂದ ವಿಶ್ವಗುರುವಾಗಲು ಸಾಧ್ಯವಿಲ್ಲ, ಧರ್ಮ ಮತ್ತು ಅಧ್ಯಾತ್ಮದ ಬೆಳವಣಿಗೆಯೂ ಅಗತ್ಯ’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಾವು 3 ಲಕ್ಷ ಕೋಟಿ ಡಾಲರ್‌ (250 ಲಕ್ಷ ಕೋಟಿ ರು.) ಆರ್ಥಿಕತೆಯಾದರೂ, ಅದು ಜಗತ್ತನ್ನೇನೂ ಅಚ್ಚರಿಗೊಳಿಸಲಾರದು. ಏಕೆಂದರೆ ಅಮೆರಿಕ, ಚೀನಾ ಹಾಗೂ ಇತರ ಹಲವು ದೇಶಗಳು ಈಗಾಗಲೇ ಈ ಸಾಧನೆಯನ್ನು ಮಾಡಿವೆ. ಬೇರೆ ದೇಶಗಳು ಸಾಧನೆಗೈದ ಹಲವಾರು ವಿಷಯಗಳಿವೆ.  

ನಾವೂ ಅದನ್ನು ಸಾಧಿಸುತ್ತೇವೆ. ಆದರೆ ಜಗತ್ತು ಆಧ್ಯಾತ್ಮಿಕತೆ ಮತ್ತು ಧರ್ಮವನ್ನು ಹೊಂದಿಲ್ಲ. ನಾವದನ್ನು ಹೊಂದಿದ್ದೇವೆ. ನಾವು ಇದರಲ್ಲಿ ಉನ್ನತಿ ಕಂಡಾಗ, ಜಗತ್ತು ನಮ್ಮ ಮುಂದೆ ತಲೆಬಾಗಿ ‘ವಿಶ್ವಗುರು’ ಎಂದು ಪರಿಗಣಿಸುತ್ತದೆ. ನಾವು ಪ್ರತಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಬೇಕು. ಆದರೆ ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಪ್ರಗತಿ ಸಾಧಿಸಿದಾಗ ಮಾತ್ರ ರಾಷ್ಟ್ರವು ನಿಜವಾದ ಅರ್ಥದಲ್ಲಿ ವಿಶ್ವಗುರು ಎಂದು ಪರಿಗಣಿಸಲ್ಪಡುತ್ತದೆ’ ಎಂದರು.

Read more Articles on