ಸಾರಾಂಶ
ನವದೆಹಲಿ: ಅಂತಾರಾಷ್ಟ್ರೀಯ ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕತೆಯು ಮುಂದಿನ ವಿತ್ತೀಯ ವರ್ಷದಲ್ಲಿ ಶೇ.6.3-6.8ರಷ್ಟು ಬೆಳವಣಿಗೆ ಸಾಧಿಸಬಹುದು ಎಂದು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷಾ ವರದಿ ಹೇಳಿದೆ. ಜೊತೆಗೆ ಇದು ಕೋವಿಡ್ ಬಳಿಕದ ಅತಿ ಕಡಿಮೆ ಆರ್ಥಿಕ ಬೆಳವಣಿಗೆ ಆಗಿರಲಿದೆ.
ವಿಶ್ವವನ್ನೇ ಚಕಿತಗೊಳಿಸಿದ್ದ ಭಾರತದ ಆರ್ಥಿಕತೆಯ ಬೆಳವಣಿಗೆಯು ಮುಂದಿನ ಹಣಕಾಸು ವರ್ಷದಲ್ಲಿ ಕೊಂಚ ವೇಗ ಕಳೆದುಕೊಳ್ಳಲಿದೆ ಎಂದಿರುವ ಸಮೀಕ್ಷೆ, ದುರ್ಬಲ ಅಂತಾರಾಷ್ಟ್ರೀಯ ಬೇಡಿಕೆಯಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಹೆಚ್ಚುತ್ತಿರುವ ಒತ್ತಡ ಮತ್ತು ಕೆಲ ಸ್ಥಳೀಯ ಕಾರಣಗಳು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಜೊತೆಗೆ 2047ರ ವಿಕಸಿತ ಭಾರತದ ಶೇ.8ರ ವಾರ್ಷಿಕ ಪ್ರಗತಿಯ ಗುರಿ ಸಾಧಿಸಲು ಹೆಚ್ಚಿನ ಸುಧಾರಣಾ ಕ್ರಮಗಳ ಅಗತ್ಯವಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಬಲಿಷ್ಠ ಆರ್ಥಿಕ ಮೂಲತತ್ವ, ನಿರುದ್ಯೋಗ ಪ್ರಮಾಣ ಕಡಿತ, ಸ್ಥಿರ ಹಣದುಬ್ಬರ ಹಾಗೂ ಇನ್ನಷ್ಟು ಸುಧಾರಣೆಗಳು ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಲಿದೆ ಎಂದು ಸರ್ವೆ ಹೇಳಿದೆ
ಅಂತಾರಾಷ್ಟ್ರೀಯಮಟ್ಟದಲ್ಲೂ ಆರ್ಥಿಕ ಬೆಳವಣಿಗೆ ದರವು ನಿರೀಕ್ಷೆಗಿಂತ ಕಡಿಮೆ ಇರಲಿದೆ. ಸೇವಾ ಕ್ಷೇತ್ರಗಳು ಉತ್ತಮ ಪ್ರಗತಿ ಸಾಧಿಸುತ್ತಿದ್ದರೂ, ಹಣದುಬ್ಬರ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿದ್ದರೂ ಕೆಲ ಪ್ರದೇಶಗಳಲ್ಲಿ ಉತ್ಪಾದನಾ ಕ್ಷೇತ್ರ ಸಮಸ್ಯೆ ಎದುರಿಸುತ್ತಿದೆ. ಭೌಗೋಳಿಕ ರಾಜಕೀಯವು ಆರ್ಥಿಕತೆಗೆ ಪ್ರಮುಖ ಸವಾಲಾಗಿದೆ ಎಂದು ಹೇಳಿದೆ.
ಆರ್ಥಿಕ ಸಮೀಕ್ಷೆ ವರದಿ
ಆರ್ಥಿಕ ಬೆಳವಣಿಗೆಗೆ ಇನ್ಫ್ರಾಹೂಡಿಕೆಯ ಹೆಚ್ಚಳ ಅವಶ್ಯಕ
ದೇಶದ ಆರ್ಥಿಕ ಬೆಳವಣಿಗೆ ದರವನ್ನು ಕಾಪಾಡಿಕೊಳ್ಳಲು ಮುಂದಿನ 2 ದಶಕಗಳಲ್ಲಿ ಮೂಲಸೌಕರ್ಯಗಳ ಮೇಲಿನ ಹೂಡಿಕೆಯಲ್ಲಿ ನಿರಂತರ ಏರಿಕೆ ಅಗತ್ಯ ಎಂದು ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಯೋಜನೆ, ಹಣಕಾಸು, ನಿರ್ಮಾಣ, ನಿರ್ವಹಣೆ, ಗಳಿಕೆ ಮತ್ತು ಪ್ರಭಾವದ ಮೌಲ್ಯಮಾಪನ ಕಾರ್ಯಗಳಲ್ಲಿ ಖಾಸಗಿಯವರ ಭಾಗವಹಿಸುವಿಕೆಯೂ ಅಗತ್ಯ.
ಎಲ್ಲಾ ಹವೆಗೆ ಒಗ್ಗಿಕೊಳ್ಳುವಬೆಳೆಗಳ ಅಭಿವೃದ್ಧಿ ಅಗತ್ಯ
ಯಾವುದೇ ಹವಾಮಾನದಲ್ಲೂ ಉತ್ತಮವಾಗಿ ಬೆಳೆಯುವ ಬೆಳೆಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯ. 2024-25 ಅವಧಿಯಲ್ಲಿ ಒಟ್ಟು ಬೆಲೆ ಏರಿಕೆಯಲ್ಲಿ ತರಕಾರಿ ಹಾಗೂ ಕಾಳುಗಳ ಪಾಲು ಶೇ.32.3 ಇದ್ದುದರಿಂದ, ಮುಂದೆ ದೀರ್ಘಾವಧಿ ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾಳುಗಳು, ಎಣ್ಣೆ ಬೀಜಗಳು, ಟೊಮ್ಯಾಟೋ, ಈರುಳ್ಳಿ ಇಳುವರಿಯನ್ನು ಹೆಚ್ಚಿಸಬೇಕು. ಆಹಾರ ಸಾಮಗ್ರಿಗಳ ದರ, ದಾಸ್ತಾನು, ಸಂಸ್ಕರಣಾ ಸೌಲಭ್ಯ ಪರಿಶೀಲನೆಗೆ ಹಲವು ಹಂತಗಳಲ್ಲಿ ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣಾ ವ್ಯವಸ್ಥೆಯಿರಬೇಕು.
ಸಿಂಗಾಪುರ ಮಾದರಿಯಲ್ಲಿಹಸಿರು ಗೋಡೆ ನಿರ್ಮಾಣಭಾರತದ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಸಿಂಗಾಪುರದ ಮಾದರಿಯಲ್ಲಿ ಹಸಿರು ಗೋಡೆಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಆರ್ಥಿಕ ಸಮೀಕ್ಷೆ ಮುಂದಿಟ್ಟಿದೆ. ದೇಶದಲ್ಲಿ ನಗರೀಕರಣವು ವೇಗವಾಗಿ ಆಗುತ್ತಿದ್ದು, ದಟ್ಟಣೆ, ಮಾಲಿನ್ಯ ಮತ್ತು ತಾಪಮಾನ ಏರಿಕೆ ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ತಡೆಗಟ್ಟುವ ಸಲುವಾಗಿ ಲಂಬವಾಗಿ ಗಿಡಗಳನ್ನು ನೆಟ್ಟು, ಹಸಿರು ಗೋಡೆ ನಿರ್ಮಿಸಲು ಸಮೀಕ್ಷೆ ಸೂಚಿಸಿದೆ.==ಎಐ ಬಳವಣಿಗೆಯಿಂದಾಗಿ
ಉದ್ಯೋಗ ಕುಸಿತ ಸಂಭವ
ಕೃತಕ ಬುದ್ಧಿಮತ್ತೆಯು ವಿವಿಧ ಕ್ಷೇತ್ರಗಳಲ್ಲಿ ಮಾನವರಷ್ಟೇ ಸಮರ್ಥವಾಗಿ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಸಾಮರ್ಥ್ಯ ಹೊಂದಿರುವುದರಿಂದ, ಮುಂದಿನ ದಿನಗಳಲ್ಲಿ ಅದು ಬೆಳವಣಿಗೆ ಕಂಡಂತೆ ದೊಡ್ಡ ಮಟ್ಟದಲ್ಲಿ ಮಧ್ಯಮ ಮತ್ತು ಕಡಿಮೆ ಆದಾಯದ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತೆ ಆಗಬಹುದು. ಕೈಗಾರಿಕಾ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಎಐನಿಂದ ಬಹುದೊಡ್ಡ ಬದಲಾವಣೆಯಾಗುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
15.30 ಕೋಟಿ ಗ್ರಾಮೀಣ
ಮನೆಗಳಿಗೆ ಕುಡಿವ ನೀರುಜಲ ಜೀವನ ಯೋಜನೆಯಡಿಯಲ್ಲಿ, 2024ರ ನವೆಂಬರ್ ವೇಳೆಗೆ ದೇಶದ ಗ್ರಾಮಗಳ 15.30 ಕೋಟಿ(ಶೇ.79.1ರಷ್ಟು) ಮನೆಗಳಿಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರಿನ ವ್ಯಸಸ್ಥೆ ಕಲ್ಪಿಸಲಾಗಿದೆ. 8 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.100ರಷ್ಟು ಗ್ರಾಮಗಳಿಲ್ಲಿ ಈಗಾಗಲೇ ವ್ಯವಸ್ಥೆಯಿದೆ. 2019ರಲ್ಲಿ ಯೋಜನೆ ಶುರುವಾದಾಗ ಇದು ಕೇವಲ 3.23(ಶೇ.17ರಷ್ಟು) ಮನೆಗಳನ್ನು ತಲುಪಿತ್ತು.
ಎಂಎಸ್ಸೆಮಿಗಳ ಮೇಲಿನನಿಯಂತ್ರಣ ಸಡಿಲಿಕೆ
ಎಂಎಸ್‌ಎಂಇಗಳ ಮೇಲೆ ನಿಯಂತ್ರಣ ಸಾಧಿಸುವುದರಿಂದ ಕಾರ್ಮಿಕರ ಉತ್ಪಾದಕತೆ ಕುಗ್ಗಿ, ಉದ್ಯೋಗದ ಬೆಳವಣಿಗೆ ಮಿತಿಗೊಂಡು, ನಾವೀನ್ಯತೆ ಮತ್ತು ಬೆಳವಣಿಗೆಯೂ ಕಡಿಮೆಯಾಗುತ್ತದೆ. ಆದ್ದರಿಂದ ನಿಯಂತ್ರಿತ ಪರಿಸರದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಮೇಲಿನ ನಿಯಂತ್ರಣದಲ್ಲಿ ಕೊಂಚ ಸಡಿಲಿಕೆ ಅಗತ್ಯವಾಗಿದೆ. ಉದ್ಯಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ.
2025ರಲ್ಲಿ ಚಿನ್ನದ ದರಇಳಿಕೆ, ಬೆಳ್ಳಿ ಬೆಲೆ ಏರಿಕೆ
ಈ ವರ್ಷದಲ್ಲಿ ಚಿನ್ನದ ಬೆಲೆ ಕುಸಿತ ಕಾಣಲಿದ್ದು, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ಕಚ್ಚಾ ವಸ್ತುಗಳ ಬೆಲೆಯೂ 2025ರಲ್ಲಿ ಶೇ.5.1ರಷ್ಟು ಹಾಗೂ 2026ರಲ್ಲಿ ಶೇ.1.7ರಷ್ಟು ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಕಬ್ಬಿಣದ ಅದಿರು ಹಾಗೂ ಝಿಂಕ್ ದರದಲ್ಲಿನ ಇಳಿಕೆಯಿಂದಾಗಿ ಲೋಹ ಹಾಗೂ ಖನಿಜಗಳ ಬೆಲೆ ಕುಸಿಯುತ್ತದೆ
ಆರೋಗ್ಯ ಕ್ಷೇತ್ರದಲ್ಲೂತಂತ್ರಜ್ಞಾನ ಕ್ರಾಂತಿ
ಮೊಬೈಲ್‌ನಲ್ಲೇ ವೈದ್ಯರು ಹಾಗೂ ತಜ್ಞರನ್ನು ಸಂಪರ್ಕಿಸುವ ಸೌಲಭ್ಯ ಒದಗಿಸುವ ಇ-ಸಂಜೀವಿನಿಯು ವಿಶ್ವದ ಅತಿ ದೊಡ್ಡ ಟೆಲಿಮೆಡಿಸಿನ್ ಯೋಜನೆಯಾಗಿದೆ. 2024ರ ನ.12ರ ವರೆಗೆ ಸುಮಾರು 31.19 ಕೋಟಿ ರೋಗಿಗಳು ಇದರ ಲಾಭ ಪಡೆದಿದ್ದಾರೆ. ಅತ್ತ, 2021ರ ಅಕ್ಟೋಬರ್‌ನಲ್ಲಿ ಅನುಷ್ಠಾನಕ್ಕೆ ಬಂದ ‘ಐ-ಡ್ರೋನ್’ ಯೋಜನೆಯ ಅಡಿ ತುರ್ತು ಪರಿಸ್ಥಿತಿಗಳಲ್ಲಿ ಡ್ರೋನ್ ಮೂಲಕ ಔಷಧ ತುಪಿಸುವ ಸೌಲಭ್ಯವೂ ಇದೆ.
ಆಯುಷ್ಮಾನ್ ಭಾರತ್‌ನಿಂದಆರೋಗ್ಯ ವೆಚ್ಚದಲ್ಲಿ ಕಡಿತ
ವಿಶ್ವದ ಬೃಹತ್ ಆರೋಗ್ಯ ವಿಮಾ ಯೋಜನೆಯಾದ ಆಯುಶ್ಮಾನ್ ಭಾರತ್ ಸಾಮಾಜಿಕ ಭದ್ರತೆ ಒದಗಿಸಿ, ಪ್ರಾಥಮಿಕ ಆರೋಗ್ಯ ವೆಚ್ಚಗಳನ್ನು ಭರಿಸುವ ಮೂಲಕ ಜನ ಚಿಕಿತ್ಸೆಗಾಗಿ ಮಾಡುವ ವೆಚ್ಚ ತಗ್ಗಿದೆ. 2025ರ ಜ.1ರ ವರೆಗೆ 36.36 ಕೋಟಿಗೂ ಅಧಿಕ ಆಯುಶ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. 12 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು, ಪ್ರತಿ ಪರಿವಾರಕ್ಕೆ 5 ಲಕ್ಷ ರು. ವರೆಗಿನ ಆಸ್ಪತ್ರೆ ಖರ್ಚುಗಳನ್ನು ಭರಿಸಲಾಗುತ್ತಿದೆ.
ಗ್ರಾಮಗಳಲ್ಲಿ ಜೀವನ ಗುಣಮಟ್ಟಸುಧಾರಣೆಗೆ ಸರ್ಕಾರ ಒತ್ತು
ಸಮಾನ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ಖಚಿತಪಡಿಸುವ ಸಲುವಾಗಿ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿನ ಜನರ ಜೀವನದ ಗುಣಮಟ್ಟ ಸುಧಾರಿಸುವತ್ತ ಒತ್ತು ನೀಡಿದೆ. ಇದರ ಭಾಗವಾಗಿ ಮೂಲಸೌಕರ್ಯ ಅಭಿವೃದ್ಧಿ, ವಸತಿ ನಿರ್ಮಾಣ, ಕುಡಿಯುವ ನೀರು, ನೈರ್ಮಲ್ಯ, ಶುದ್ಧ ಇಂಧನ, ಸಾಮಾಜಿಕ ರಕ್ಷಣೆ ಮತ್ತು ಗ್ರಾಮೀಣ ಸಂಪರ್ಕ, ಗ್ರಾಮೀಣ ಜೀವನೋಪಾಯ ಹೆಚ್ಚಳದತ್ತ ಗಮನ ಹರಿಸಲಾಗುತ್ತಿದೆ. ಜತೆಗೆ, ‘ಸ್ವಾಮಿತ್ವ’ದಂತಹ ಯೋಜನೆಗಳ ಮೂಲಕ ಡಿಜಿಟಲೀಕರಣ ಮತ್ತು ತಂತ್ರಜ್ಞಾನಕ್ಕೂ ಮಹತ್ವ ನೀಡಲಾಗಿದೆ.
ರೈಲು ಸಂಪರ್ಕ ವಿಸ್ತರಣೆಶೇ.10ರಷ್ಟು ಇಳಿಕೆ
ರೈಲ್ವೇ ಸಂಪರ್ಕದ ವಿಸ್ತರಣೆಯು ಶೇ.10ರಷ್ಟು ಕುಸಿತ ಕಂಡಿದ್ದು, ಇಂಜಿನ್ ಮತ್ತು ವ್ಯಾಗನ್‌ಗಳ ಉತ್ಪಾದನೆ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಏರಿಕೆಯಾಗಿದೆ. 2024ರಲ್ಲಿ 2,282 ಕಿ.ಮೀ. ರೈಲು ಹಳಿ ಕಾಮಗಾರಿಯನ್ನು ಆರಂಭಿಸಲಾಗಿದ್ದು, 2025ರ ಆರ್ಥಿಕ ವರ್ಷದಲ್ಲಿ ಇದು 2,031 ಕಿ.ಮೀ.ಗೆ ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ವ್ಯಾಗನ್ ಉತ್ಪಾದನೆ 22,042ರಿಂದ 26,148ಕ್ಕೆ ಹಾಗೂ ಇಂಜಿನ್ ಉತ್ಪಾದನೆ 968ರಿಂದ 1042ಕ್ಕೆ ಏರಿಕೆಯಾಗಿರುವುದು ಗಮನಾರ್ಹ. 2023-24ರಲ್ಲಿ 41 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಆರಂಭಿಸಿದರೆ, 2024-25ರಲ್ಲಿ ಕೇವಲ 17 ರೈಲುಗಳು ಹಳಿಗಿಳಿದಿವೆ.
ಪಿಎಂ ಆವಾಸ್ ಯೋಜನೆಅಡಿ 1.18 ಕೋಟಿ ಮನೆನಗರ ಪ್ರದೇಶಗಳಲ್ಲಿ ಶಾಶ್ವತ ವಸತಿ ವ್ಯವಸ್ಥೆ ಒದಗಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 2024ರ ನ.25ರ ವರೆಗೆ 1.18 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ 1.14 ಕೋಟಿ ಮನೆ ನಿರ್ಮಾಣ ಕೆಲಸ ಆರಂಭವಾದರೆ, 89 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 2025ರಲ್ಲಿ 6 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ.==ಯು-ವಿನ್ ಪೋರ್ಟಲ್‌ನಲ್ಲಿ7.44 ಕೋಟಿ ಜನ ನೋಂದಣಿದೇಶದ ಎಲ್ಲಾ ಗರ್ಭಿಣಿಯರು ಮತ್ತು ಮಕ್ಕಳ ಲಸಿಕೆಯ ದಾಖಲೆಯನ್ನು ಸಂಗ್ರಹಿಸಿಡುವ ಯು-ವಿನ್ ಪೋರ್ಟಲ್‌ನಲ್ಲಿ 2024ರ ನ.7ರ ವರೆಗೆ ಒಟ್ಟು 7.44 ಜನರು ನೋಂದಣಿ ಮಾಡಿಕೊಂಡಿದ್ದಾರೆ. 11 ಪ್ರದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಈ ಪೋರ್ಟಲ್‌ನಲ್ಲಿ ಫಲಾನುಭವಿಗಳು ಮೊಬೈಲ್ ಅಥವಾ ವೆಬ್ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶವಿದ್ದು, ಮುಂದಿನ ಲಸಿಕೆಯ ದಿನಾಂಕವನ್ನು ಟ್ರ್ಯಾಕ್ ಮಾಡಲು, ಸಂದೇಶಗಳ ಮೂಲಕ ನೆನಪಿಸಲು ಇದು ಸಹಕಾರಿಯಾಗಿದೆ.