ಫ್ಯಾಸ್ಟ್ಯಾಗ್‌ಗಳಿಲ್ಲದೆ ಟೋಲ್‌ಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ವಿಧಿಸಲಾಗುವ ದಂಡ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2024- 25ನೇ ಸಾಲಿನ ಅವಧಿಯಲ್ಲಿ ಕರ್ನಾಟಕದಲ್ಲಿ 130 ಕೋಟಿ ರು. ದಂಡ ಸಂಗ್ರಹವಾ ಗಿದೆ.

ನವದೆಹಲಿ : ಫ್ಯಾಸ್ಟ್ಯಾಗ್‌ಗಳಿಲ್ಲದೆ ಟೋಲ್‌ಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ವಿಧಿಸಲಾಗುವ ದಂಡ ಸಂಗ್ರಹದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2024- 25ನೇ ಸಾಲಿನ ಅವಧಿಯಲ್ಲಿ ಕರ್ನಾಟಕದಲ್ಲಿ 130 ಕೋಟಿ ರು. ದಂಡ ಸಂಗ್ರಹವಾ ಗಿದೆ.

ದಂಡದಿಂದ 129.91 ಕೋಟಿ ರು.ಸಂಗ್ರಹ

ಕೇಂದ್ರ ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕರ್ನಾಟಕವು ಒಂದು ವರ್ಷದಲ್ಲಿ ಫಾಸ್ಟ್ಯಾಗ್‌ ಬಳಸದಿರುವುದು, ಅಮಾನ್ಯ ಫಾಸ್ಟ್ಯಾಗ್‌ಗಳಿಗೆ ವಿಧಿಸುವ ದಂಡದಿಂದ 129.91 ಕೋಟಿ ರು.ಸಂಗ್ರಹಿಸಿದೆ. 

ಫಾಸ್ಟ್ಯಾಗ್‌ ರಹಿತ ಸಂಚಾರಕ್ಕೆ ಸದ್ಯ ದುಪ್ಪಟ್ಟ ದಂಡ

ಹೆಚ್ಚು ಸಂಚಾರ ದಟ್ಟಣೆಯಿರುವ ರಾಜ್ಯಗಳನ್ನೂ ಮೀರಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮಹಾರಾಷ್ಟ್ರ ( ₹110 ಕೋಟಿ), ಉತ್ತರ ಪ್ರದೇಶ( ₹81 ಕೋಟಿ), ಗುಜರಾತ್ ( ₹78.5 ಕೋಟಿ), ತಮಿಳುನಾಡು ( ₹71.82 ಕೋಟಿ) ನಂತರದ ಸ್ಥಾನದಲ್ಲಿದೆ. ಸದ್ಯದ ನಿಯಮದ ಪ್ರಕಾರ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ರಹಿತ ಸಂಚಾರಕ್ಕೆ ಸದ್ಯ ದುಪ್ಪಟ್ಟ ದಂಡವನ್ನು ವಿಧಿಸಲಾಗುತ್ತಿದೆ.