ಸಾರಾಂಶ
ಆಮ್ ಆದ್ಮಿ ಪಕ್ಷ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನಿಯಮಕ್ಕೆ ವಿರುದ್ಧವಾಗಿ 7 ಕೋಟಿ ರು.ಗೂ ಅಧಿಕ ವಿದೇಶಿ ಹಣವನ್ನು ದೇಣಿಗೆ ರೂಪದಲ್ಲಿ ಅಕ್ರಮವಾಗಿ ಪಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ನವದೆಹಲಿ: ದೆಹಲಿ ಮತ್ತು ಪಂಜಾಬ್‌ನಲ್ಲಿರುವ ಆಮ್ ಆದ್ಮಿ ಪಕ್ಷ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ನಿಯಮಕ್ಕೆ ವಿರುದ್ಧವಾಗಿ 7 ಕೋಟಿ ರು.ಗೂ ಅಧಿಕ ವಿದೇಶಿ ಹಣವನ್ನು ದೇಣಿಗೆ ರೂಪದಲ್ಲಿ ಅಕ್ರಮವಾಗಿ ಪಡೆದಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಆಪ್‌ನಲ್ಲಿದ್ದ ,ಸದ್ಯ ಕಾಂಗ್ರೆಸ್‌ನಲ್ಲಿರುವ ಪಂಜಾಬ್‌ನ ಮಾಜಿ ಶಾಸಕ ಸುಖಪಾಲ್ ಸಿಂಗ್ ಖೈರಾ ಮತ್ತು ಕೆಲ ನಾಯಕರರಿಂದ ಡ್ರಗ್ಸ್ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಲ ದಾಖಲೆಗಳನ್ನು ಮತ್ತು ಇ-ಮೇಲ್ ವಶ ಪಡಿಸಿಕೊಂಡ ಪ್ರಕರಣದ ಭಾಗವಾಗಿ ಈ ಮಾಹಿತಿ ಹೊರ ಬಿದ್ದಿದೆ.
ಈ ಪ್ರಕರಣದಲ್ಲಿ ವಿದೇಶಿ ಹಣದ ಒಳಹರಿವಿಕೆಯ ಬಗ್ಗೆ ಗೃಹ ಸಚಿವಾಲಯದೊಂದಿಗೆ ಮಾಹಿತಿ ಹಂಚಿಕೊಂಡಿರುವ ಇಡಿ, ಆಪ್ ಇಲ್ಲಿಯವರೆಗೆ ಸುಮಾರು 7.08 ಕೋಟಿ ಸಾಗರೋತ್ತರ ದೇಣಿಗೆಗಳನ್ನು ಸ್ವೀಕರಿಸಿದೆ. ಅದರಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕೆಲ ವಿವರಗಳನ್ನು ಹೊರತು ಪಡಿಸಿ, ದಾನಿಗಳ ಹೆಸರು ಮತ್ತು ರಾಷ್ಟ್ರೀಯತೆಯನ್ನು ಮರೆ ಮಾಚಲಾಗಿದೆ ಎಂದು ಹೇಳಿದೆ.