ದಿಲ್ಲಿ ಅಬಕಾರಿ ಹಗರಣ: ಕೇಜ್ರಿವಾಲ್‌ಗೆ ಇ.ಡಿ. 8ನೇ ಸಮನ್ಸ್‌

| Published : Feb 28 2024, 02:31 AM IST

ಸಾರಾಂಶ

ದಿಲ್ಲಿ ಅಬಕಾರಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) 8ನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಮಾ.4ರಂದು ಕೇಜ್ರಿವಾಲ್‌ ಹಾಜರಿಗೆ ಸೂಚನೆ ನೀಡಿದೆ.

ನವದೆಹಲಿ: ದಿಲ್ಲಿ ಅಬಕಾರಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) 8ನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ. ಮಾ.4ರಂದು ಕೇಜ್ರಿವಾಲ್‌ ಹಾಜರಿಗೆ ಸೂಚನೆ ನೀಡಿದೆ.

ಈವರೆಗೆ ಕೇಜ್ರಿವಾಲ್‌ 7 ಸಮನ್ಸ್‌ಗಳಿಗೆ ಹಾಜರಾಗಿಲ್ಲ. ಏಕೆಂದರೆ ಸಮನ್ಸ್‌ ನೀಡಿಕೆ ವಿಷಯ ಕೋರ್ಟ್‌ನಲ್ಲಿರುವ ಕಾರಣ ಕೋರ್ಟ್‌ ಆದೇಶ ಆಧರಿಸಿ ತಾವು ಹಾಜರಾತಿ ಬಗ್ಗೆ ನಿರ್ಣಯಿಸುವುದಾಗಿ ಕೇಜ್ರಿವಾಲ್‌ ಹೇಳಿದ್ದಾರೆ. ಕೇಜ್ರಿ ಗೈರು ಹಾಜರಿ ಪ್ರಶ್ನಿಸಿ ಇ.ಡಿ. ದಿಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮಾ.16ಕ್ಕೆ ಅದರ ವಿಚಾರಣೆ ಇದೆ.