ಸಾರಾಂಶ
ಕರಡು ಸಮಿತಿಯಲ್ಲಿದ್ದಕ್ಕೆ ಸಮನ್ಸ್ ನೀಡಿ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ
ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾಗಿರುವ ನಡುವೆಯೇ, ದೆಹಲಿಯ ಕಾನೂನು ಸಚಿವ ಕೈಲಾಶ್ ಗೆಹ್ಲೋಟ್‌ರನ್ನು ಜಾರಿ ನಿರ್ದೇಶನಾಲಯ ಶನಿವಾರ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ, ‘ಜಾರಿ ನಿರ್ದೇಶನಾಲಯವು ನನ್ನನ್ನು ಅಬಕಾರಿ ನೀತಿಯನ್ನು ರೂಪಿಸುವ ತಂಡದ ಸದಸ್ಯನಾಗಿದ್ದ ಹಿನ್ನೆಲೆಯಲ್ಲಿ ನೀತಿಗೆ ಸಂಬಂಧಪಟ್ಟ ಸಂಗತಿಗಳ ಕುರಿತು ವಿಚಾರಣೆ ನಡೆಸಿದೆ’ ಎಂದು ತಿಳಿಸಿದರು.ಕೈಲಾಶ್ ಗೆಹ್ಲೋಟ್ ಅವರಿಗೆ ಇದು ಜಾರಿ ನಿರ್ದೇಶನಾಲಯದಿಂದ ಜಾರಿ ಮಾಡಿದ್ದ ಎರಡನೇ ಸಮನ್ಸ್ ಆಗಿದ್ದು, ಮೊದಲ ಸಮನ್ಸ್‌ಗೆ ಬಜೆಟ್ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗೈರಾಗಿದ್ದರು.