ಪ್ರತಿ ವರ್ಷಎನ್‌ಸಿಆರ್‌ಟಿ ಪಠ್ಯ ಪರಿಷ್ಕರಣೆಗೆ ಕೇಂದ್ರ ಸೂಚನೆ

| Published : Apr 30 2024, 02:11 AM IST / Updated: Apr 30 2024, 04:52 AM IST

ಪ್ರತಿ ವರ್ಷಎನ್‌ಸಿಆರ್‌ಟಿ ಪಠ್ಯ ಪರಿಷ್ಕರಣೆಗೆ ಕೇಂದ್ರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಲ್ಲಿ ನಿರಂತರ ಬದಲಾವಣೆ ಅಗತ್ಯ. ಈ ಕಾರಣಕ್ಕಾಗಿ ಪ್ರತಿ ವರ್ಷ ಎನ್‌ಸಿಆರ್‌ಟಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಹೊಸ ವಿಚಾರಗಳನ್ನು ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಕೇಂದ್ರ ಶಿಕ್ಷಣ ಇಲಾಖೆ ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ: ಶಿಕ್ಷಣದಲ್ಲಿ ನಿರಂತರ ಬದಲಾವಣೆ ಅಗತ್ಯ. ಈ ಕಾರಣಕ್ಕಾಗಿ ಪ್ರತಿ ವರ್ಷ ಎನ್‌ಸಿಆರ್‌ಟಿ ಪಠ್ಯ ಪುಸ್ತಕವನ್ನು ಪರಿಷ್ಕರಿಸಿ, ಹೊಸ ವಿಚಾರಗಳನ್ನು ಸೇರಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗೆ ಕೇಂದ್ರ ಶಿಕ್ಷಣ ಇಲಾಖೆ ಸಲಹೆ ನೀಡಿದೆ ಎಂದು ಮೂಲಗಳು ಹೇಳಿವೆ. 

ಹಿಂದಿನಿಂದಲೂ ಎನ್‌ಸಿಆರ್‌ಟಿ ಪಠ್ಯ ಕ್ರಮದಲ್ಲಿ ಕಾಲಕಾಲಕ್ಕೆ ಪಠ್ಯಪುಸ್ತಕ ಪರಿಷ್ಕರಣೆಯಂತಹ ಪದ್ಧತಿ ಇರಲಿಲ್ಲ. ಆದರೆ ಇದೀಗ ಕಾಲ ವೇಗಗತಿಯಲ್ಲಿ ಬದಲಾವಣೆ ಹೊಂದುತ್ತಿದ್ದು, ಪಠ್ಯಪುಸ್ತಕದಲ್ಲಿ ಬದಲಾವಣೆ ತರುವುದು ಅವಶ್ಯಕವೆಂದು ಇಲಾಖೆ ಹೇಳಿದೆ.

‘ಒಮ್ಮೆ ಮುದ್ರಿಸಿದ ಪುಸ್ತಕವನ್ನು ಸುದೀರ್ಘ ವರ್ಷದ ತನಕ ಇಟ್ಟುಕೊಳ್ಳುವುದು ಸೂಕ್ತವಲ್ಲ. ಪ್ರತಿವರ್ಷ ಪುಸ್ತಕ ಮುದ್ರಿಸುವ ಮುನ್ನ ಪರಿಶೀಲಿಸಿ. ಕೃತಕ ಬುದ್ಧಿಮತ್ತೆಯಂತಹ ವಿಷಯಗಳು ವಿಕಸನಗೊಳ್ಳುವುದಕ್ಕೆ ನೆರವಾಗುತ್ತದೆ. 

ಹೀಗಾಗಿ ಪ್ರತಿ ವರ್ಷ ಪರಿಷ್ಕರಿಸಿ ಬದಲಾವಣೆ ತನ್ನಿ’ ಎಂದು ಸಚಿವಾಲಯ ಹೇಳಿದೆ ಎಂದು ಮೂಲಗಳು ಹೇಳಿವೆ. ಈ ವರ್ಷದಿಂದಲೇ ಆ ನಿಯಮವನ್ನು ಜಾರಿಗೆ ತರಲು ಸಲಹೆ ನೀಡಿದೆ. ಆದರೆ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಕಳೆದ ವರ್ಷದ ಪಠ್ಯಕ್ರಮಗಳ ಆಧಾರದಲ್ಲಿಯೇ ಪ್ರಸ್ತಕ ಸಾಲಿನ ಪಠ್ಯ ಪುಸ್ತಕಗಳನ್ನು ಈಗಾಗಲೇ ಸಿದ್ಧಪಡಿಸಿದೆ.ಹೀಗಾಗಿ ಮೂಲಗಳ, ಪ್ರಕಾರ ಪರಿಷ್ಕರಿಸಿದ ಹೊಸ ಪಠ್ಯಪುಸ್ತಕಗಳು 2026 ರ ವೇಳೆಗೆ ಸಿದ್ಧವಾಗಲಿದೆ .