ಬೆಂಗಳೂರು: ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯಾ ಜೂನಿಯರ್ ಪಿಕಲ್‌ಬಾಲ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಕರ್ನಾಟಕದ 8 ಮಂದಿ ಆಯ್ಕೆಯಾಗಿದ್ದಾರೆ. ಇವರ ಹೆಸರನ್ನು ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಸಂಸ್ಥೆ ಪ್ರಕಟಿಸಿದೆ. ಚಾಂಪಿಯನ್‌ಶಿಪ್‌ನಲ್ಲಿ ಹಿತ್ವಿಕ್, ಶ್ರೇಷ್ಠಾ, ಐದಿನ್ ಫರೀದ್, ಶ್ರೀಹರಿ, ಕೀರ್ತಿ, ಲಿಖಿತಾ, ಖುಷಿ ಮತ್ತು ಜಶನ್ ಪಾಲ್ಗೊಳ್ಳಲಿದ್ದಾರೆ. ಈ ಆಟಗಾರರ ಹೆಸರುಗಳನ್ನು ಆಲ್ ಇಂಡಿಯಾ ಪಿಕಲ್‌ಬಾಲ್ ಸಂಸ್ಥೆಗೆ ಶಿಫಾರಸು ಮಾಡಲಾಗಿದ್ದು, ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಪಿಕಲ್‌ಬಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಜತ್ ಕಾಂಕರ್ ತಿಳಿಸಿದ್ದಾರೆ.