ಮಾ.15ರ ಸಂಜೆ 5ರೊಳಗೆ ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಸಿಇಸಿ

| Published : Mar 14 2024, 02:01 AM IST

ಸಾರಾಂಶ

ಸುಪ್ರೀಂ ಕೋರ್ಟ್‌ನಿಂದ ನಿಷೇಧಕ್ಕೊಳಗಾಗಿರುವ ಚುನಾವಣಾ ಬಾಂಡ್‌ ಮಾಹಿತಿಯನ್ನು ಕೋರ್ಟ್‌ ನೀಡಿದ ಸಮಯದಲ್ಲಿಯೇ (ಮಾ.15ರ ಸಂಜೆ 5ರೊಳಗೆ) ಬಹಿರಂಗ ಮಾಡಲಿದ್ದೇವೆ ಎಂದು ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಶ್ರೀನಗರ: ಸುಪ್ರೀಂ ಕೋರ್ಟ್‌ನಿಂದ ನಿಷೇಧಕ್ಕೊಳಗಾಗಿರುವ ಚುನಾವಣಾ ಬಾಂಡ್‌ ಮಾಹಿತಿಯನ್ನು ಕೋರ್ಟ್‌ ನೀಡಿದ ಸಮಯದಲ್ಲಿಯೇ (ಮಾ.15ರ ಸಂಜೆ 5ರೊಳಗೆ) ಬಹಿರಂಗ ಮಾಡಲಿದ್ದೇವೆ ಎಂದು ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಪೂರ್ವಭಾವಿ ಭೇಟಿ ಬಳಿಕ ಮಾತನಾಡಿದ ಆಯುಕ್ತರು,‘ ನಮಲ್ಲಿ ಮೂರು ಸ್ತಂಭಗಳಿವೆ. ಅವು, ಬಹಿರಂಗ ಬಹಿರಂಗ ಬಹಿರಂಗ. ನಾವು ಎಲ್ಲವನ್ನು ಜನರಿಗೆ ಬಹಿರಂಗಪಡಿಸುತ್ತೇವೆ. ಭಾರತೀಯ ಸ್ಟೇಟ್ ಬ್ಯಾಂಕ್‌ ಚುನಾವಣಾ ಆಯೋಗಕ್ಕೆ ಸರಿಯಾದ ಸಮಯಕ್ಕೆ ಚುನಾವಣೆ ಬಾಂಡ್‌ಗಳ ಮಾಹಿತಿಯನ್ನು ಕೊಟ್ಟಿದೆ. ಇದನ್ನು ಕೋರ್ಟ್‌ ಸೂಚಿಸಿದಂತೆ ಮಾ.15ರ ಸಂಜೆ 5 ಗಂಟೆಯೊಳಗೆ ನಮ್ಮ ವೆಬ್‌ಸೈಟ್‌ನಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ಹೇಳಿದ್ದಾರೆ.