ಲೋಕ ಚುನಾವಣೆಗೆ ಮೈಸೂರಿಂದ 26 ಲಕ್ಷ ಬಾಟಲ್‌ ಇಂಕ್‌ ಪೂರೈಕೆ

| Published : Feb 22 2024, 01:47 AM IST / Updated: Feb 22 2024, 07:43 AM IST

ink
ಲೋಕ ಚುನಾವಣೆಗೆ ಮೈಸೂರಿಂದ 26 ಲಕ್ಷ ಬಾಟಲ್‌ ಇಂಕ್‌ ಪೂರೈಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಗೆ ಮೈಸೂರು ಪೇಯಿಂಟ್ಸ್‌ ಅಂಡ್‌ ವಾರ್ನಿಷ್‌ ಲಿಮಿಟೆಡ್‌ಗೆ ಚುನಾವಣಾ ಆಯೋಗದಿಂದ 26 ಲಕ್ಷ ಇಂಕ್‌ ಬಾಟಲ್‌ಗಾಗಿ ಬೇಡಿಕೆ ಸಲ್ಲಿಕೆಯಾಗಿದೆ.

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡುವುದಕ್ಕಾಗಿ ಮೈಸೂರು ಪೇಯಿಂಟ್‌ ಮತ್ತು ವಾರ್ನಿಷ್‌ ಲಿ., 26 ಲಕ್ಷ ಇಂಕ್‌ ಬಾಟಲ್‌ಗಳನ್ನು ಪೂರೈಸಲಿದೆ. 

ಮತದಾನದ ಬಳಿಕ ಬೆರಳುಗಳಿಗೆ ಗುರುತಾಗಿ ಹಚ್ಚಲು ಈ ಇಂಕ್‌ ಬಳಕೆಯಾಗುತ್ತದೆ. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಈ ಸಂಸ್ಥೆ 1962ರಿಂದಲೂ ಚುನಾವಣೆಗೆ ಬೇಕಾದ ಇಂಕ್‌ ತಯಾರು ಮಾಡುತ್ತಿದೆ. 

‘ಈ ಬಾರಿ ನಮಗೆ ಒಟ್ಟು 26.5 ಲಕ್ಷ ಬಾಟಲ್‌ಗಳಿಗೆ ಆರ್ಡರ್‌ ಬಂದಿದೆ. ಈಗಾಗಲೇ ನಾವು ಶೇ.60ರಷ್ಟನ್ನು ರಾಜ್ಯಗಳಿಗೆ ಪೂರೈಕೆ ಮಾಡಿದ್ದೇವೆ. 24 ರಾಜ್ಯಗಳು ಈಗಾಗಲೇ ತಮ್ಮ ಪಾಲಿನ ಇಂಕನ್ನು ಪಡೆದುಕೊಂಡಿವೆ. 

ಉಳಿದಿರುವ ಆರ್ಡರನ್ನು ಮಾ.20ರೊಳಗೆ ಪೂರ್ಣಗೊಳಿಸುತ್ತೇವೆ’ ಎಂದು ಸಂಸ್ಥೆಯ ನಿರ್ದೇಶಕ ಕೆ.ಮೊಹಮ್ಮದ್‌ ಇರ್ಫಾನ್‌ ಹೇಳಿದ್ದಾರೆ. 10 ಎಂ.ಎಲ್. ಇಂಕ್ ಇರುವ ಬಾಟಲ್‌ಗಳನ್ನು ತಯಾರು ಮಾಡಲಾಗುತ್ತದೆ. 

ಒಂದು ಬಾಟಲ್‌ನಿಂದ ಸುಮಾರು 700 ಬೆರಳುಗಳಿಗೆ ಇಂಕ್‌ ಹಚ್ಚಬಹುದಾಗಿದೆ. ಈ ಇಂಕ್‌ 3 ದಿನಗಳ ಕಾಲ ಬೆರಳಿನ ಮೇಲೆ ಉಳಿದುಕೊಂಡಿದ್ದರೆ, ಉಗುರಿನ ಮೇಲಿರುವ ಇಂಕ್‌ ಅಳಿಸಿಹೋಗುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಇಂಕ್ ಹಚ್ಚಲಾಗುತ್ತದೆ.