ಶಾಂತಿಯುತ ಹಬ್ಬ ಆಚರಣೆ ಮಾಡದ ಜನರಿಗೆ ಚುನಾವಣೆ ಬೇಡ: ಕಲ್ಕತಾ ಹೈಕೋರ್ಟ್‌

| Published : Apr 24 2024, 02:18 AM IST

ಶಾಂತಿಯುತ ಹಬ್ಬ ಆಚರಣೆ ಮಾಡದ ಜನರಿಗೆ ಚುನಾವಣೆ ಬೇಡ: ಕಲ್ಕತಾ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಮನವಮಿ ಆಚರಣೆ ವೇಳೆ ಗಲಭೆಗೆ ಖಂಡನೆ ವ್ಯಕ್ತಪಡಿಸಿ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಸಾಧ್ಯವಾಗದ ಪ್ರದೇಶಗಳಿಗೆ ಚುನಾವಣೆ ನಡೆಸುವುದೇ ಬೇಡ ಎಂದು ಕಿಡಿಕಾರಿದೆ.

ಕೋಲ್ಕತಾ: ಎರಡು ಕೋಮುಗಳ ನಡುವೆ ಶಾಂತಿಯುತವಾಗಿ ಧಾರ್ಮಿಕ ಆಚರಣೆಗಳನ್ನು ಕೆಲವೇ ಅವಧಿಗೂ ನಡೆಸಲು ಸಾಧ್ಯವಾಗದಿದ್ದರೆ ಅಂತಹ ಪ್ರದೇಶಗಳಲ್ಲಿ ಚುನಾವಣೆ ನಡೆಸುವುದೇ ಬೇಡ ಎಂಬುದಾಗಿ ಕಲ್ಕತ್ತಾ ಹೈಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ ಶಿವಗಂಗಂ ನೇತೃತ್ವದ ಪೀಠ, ‘ರಾಮನವಮಿಯ ವೇಳೆ ಎರಡು ಕೋಮುಗಳ ನಡುವೆ ಕೂಚ್‌ ಬೇಹಾರ್‌ನಲ್ಲಿ ಘರ್ಷಣೆ ನಡೆದಿದೆ ಎಂಬ ಪ್ರಕರಣ ನಮ್ಮ ಮುಂದೆ ಬಂದಿದೆ. ಆದರೆ ಎರಡು ಸಮುದಾಯಗಳು ತಮ್ಮ ಧಾರ್ಮಿಕ ಆಚರಣೆಯನ್ನು ಕೆಲವೇ ಗಂಟೆಗಳ ಅವಧಿಗೂ ಶಾಂತಿಯುತವಾಗಿ ನಡೆಸಲು ಆಗದಿದ್ದರೆ ಅಂತಹ ಪ್ರದೇಶದಲ್ಲಿ ಚುನಾವಣೆ ಏಕೆ ನಡೆಸಬೇಕು? ಚುನಾವಣೆ ನಡೆಸಿದಲ್ಲಿ ಮತ್ತೊಂದು ಗೊಂದಲಕ್ಕೆ ಕಾರಣವಾಗುತ್ತದೆ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಚುನಾವಣೆ ನಡೆಸುವುದೇ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿ ವಿಚಾರಣೆಯನ್ನು ಮುಂದೂಡಿದೆ.