ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಜಗತ್ತಿನಲ್ಲಿ ಇದುವರೆಗೆ ಯಾರೂ ಬರೆಯದ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅಂದಾಜಿನ ಪ್ರಕಾರ, ಅವರ ನಿವ್ವಳ ಆಸ್ತಿ 1 ಟ್ರಿಲಿಯನ್ ಡಾಲರ್‌ ಮೌಲ್ಯವನ್ನು ದಾಟುವ ಸಾಧ್ಯತೆ ಇದೆ. ಹೀಗೇನಾದರೂ ಆದರೆ ಮಸ್ಕ್‌ ಪ್ರಪಂಚದ ಮೊಟ್ಟ ಮೊದಲ ಲಕ್ಷ ಕೋಟ್ಯಾಧೀಶನಾಗಲಿದ್ದಾರೆ.

ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಜಗತ್ತಿನಲ್ಲಿ ಇದುವರೆಗೆ ಯಾರೂ ಬರೆಯದ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅಂದಾಜಿನ ಪ್ರಕಾರ, ಅವರ ನಿವ್ವಳ ಆಸ್ತಿ 1 ಟ್ರಿಲಿಯನ್ ಡಾಲರ್‌ ಮೌಲ್ಯವನ್ನು ದಾಟುವ ಸಾಧ್ಯತೆ ಇದೆ. ಹೀಗೇನಾದರೂ ಆದರೆ ಮಸ್ಕ್‌ ಪ್ರಪಂಚದ ಮೊಟ್ಟ ಮೊದಲ ಲಕ್ಷ ಕೋಟ್ಯಾಧೀಶನಾಗಲಿದ್ದಾರೆ.

ಸುಮಾರು 9,49,50,50,00,00,000 ರು.

ಪ್ರಸ್ತುತ ವಿನಿಮಯ ದರದ ಪ್ರಕಾರ, ಇದು ಸುಮಾರು 9,49,50,50,00,00,000 ರು. (ಸುಮಾರು 9.5 ಲಕ್ಷ ಕೋಟಿ ರು.) ಆಗುತ್ತದೆ. ಮಸ್ಕ್ ಆಸ್ತಿಯ ಬಹುಪಾಲು ಟೆಸ್ಲಾ ಕಂಪನಿಯಿಂದ ಬಂದಿದೆ. ಟೆಸ್ಲಾದಲ್ಲಿ ಅವರ ಷೇರುಗಳ ಮೌಲ್ಯ ಸುಮಾರು 273 ಬಿಲಿಯನ್ ಡಾಲರ್‌ ಆಗಿದೆ. ಸ್ಪೇಸ್‌ಎಕ್ಸ್ ಕಂಪನಿಯ ಪ್ರಾರಂಭಿಕ ಷೇರು ಮಾರಾಟ (ಐಪಿಒ) ನಡೆದಲ್ಲಿ, ಅವರ ಆಸ್ತಿಗೆ ಇನ್ನೂ 841 ಬಿಲಿಯನ್ ಡಾಲರ್‌ ಸೇರಬಹುದು ಎಂದು ಸಿಎನ್‌ಎನ್ ವರದಿ ಮಾಡಿದೆ. ಈ ಎಲ್ಲಾ ಅಂಕಿಅಂಶಗಳು ಸತ್ಯವಾದರೆ, ಮಸ್ಕ್ ಪ್ರಪಂಚದ ಮೊದಲ ಟ್ರಿಲಿಯನೇರ್ ಆಗುವ ಮೂಲಕ ಹೊಸ ದಾಖಲೆ ಬರೆಯಲಿದ್ದಾರೆ.

ಮಸ್ಕ್ ಆಸ್ತಿ ಈ ದೇಶಗಳಿಗಿಂತ ಅಧಿಕ!:

ಒಂದು ವೇಳೆ ಮಸ್ಕ್ 1 ಟ್ರಿಲಿಯನ್‌ ಡಾಲರ್‌ ಕ್ಲಬ್‌ಗೆ ಸೇರಿದರೆ ಅವರ ಆಸ್ತಿ ತೈವಾನ್ (977 ಬಿಲಿಯನ್ ಡಾಲರ್‌), ಐರ್ಲೆಂಡ್ (779 ಬಿಲಿಯನ್ ಡಾಲರ್‌), ಸ್ವೀಡನ್ (760 ಬಿಲಿಯನ್ ಡಾಲರ್‌) ಮತ್ತು ಸಿಂಗಾಪುರ (660 ಬಿಲಿಯನ್) ಸೇರಿದಂತೆ ಹಲವು ದೇಶಗಳ ಆರ್ಥಿಕತೆಗಿಂತ ಅಧಿಕವಾಗುತ್ತದೆ.