ಯುಪಿಎಗಿಂತ ಎನ್‌ಡಿಎ ಕಾಲದಲ್ಲಿ 10 ವರ್ಷಗಳ ಅವಧಿಯಲ್ಲಿ 5 ಪಟ್ಟು ಅಧಿಕ ಉದ್ಯೋಗ ಸೃಷ್ಟಿ!

| Published : Jan 03 2025, 12:31 AM IST / Updated: Jan 03 2025, 04:55 AM IST

ಸಾರಾಂಶ

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯ 10 ವರ್ಷಗಳಿಗೆ ಹೋಲಿಸಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಐದು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ.

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯ 10 ವರ್ಷಗಳಿಗೆ ಹೋಲಿಸಿದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ 10 ವರ್ಷಗಳ ಅವಧಿಯಲ್ಲಿ ಐದು ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. 2014-15ರಲ್ಲಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ದೇಶದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಶೇ.36ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವೀಯ, ‘2014-15ರಲ್ಲಿ ದೇಶದಲ್ಲಿ 47.15 ಕೋಟಿ ಉದ್ಯೋಗ ಇತ್ತು. ಯುಪಿಎ ಆಡಳಿತದ ಅವಧಿಯಾದ 2004-14ರಲ್ಲಿ ಉದ್ಯೋಗ ಬೆಳವಣಿಗೆ ಕೇವಲ ಶೇ.7ರಷ್ಟಿತ್ತು. ಅಂದರೆ ಕೇವಲ 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿ ಯಾಗಿತ್ತು. ಆದರೆ 2023-24ರಲ್ಲಿ ದೇಶದಲ್ಲಿ ಉದ್ಯೋಗ ಪ್ರಮಾಣ 64.33 ಕೋಟಿಗೆ ತಲುಪಿದೆ. ಮೋದಿ ಸರ್ಕಾರದ ಅವಧಿಯಾದ 2014-24ರಲ್ಲಿ ಉದ್ಯೋಗ ಬೆಳವಣಿಗೆ ಪ್ರಮಾಣ ಶೇ.36ರಷ್ಟು ದಾಖಲಾಗಿದೆ. ಈ ಅವಧಿಯಲ್ಲಿ 17.19 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಸಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲೇ 4.6 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳಿದ್ದಾರೆ.

ಯಾವ್ಯಾವ ಕ್ಷೇತ್ರ ಎಷ್ಟೆಷ್ಟು?:

ಕೃಷಿ: ಯುಪಿಎ ಅವಧಿಯಲ್ಲಿ ಶೇ.16ರಷ್ಟು ಉದ್ಯೋಗ ಕಡಿತ. ಎನ್‌ಡಿಎ ಅವಧಿಯಲ್ಲಿ ಶೇ.19ರಷ್ಟು ಹೆಚ್ಚು ಉದ್ಯೋಗ ಸೃಷ್ಟಿ.

ಉತ್ಪಾದನೆ:

ಯುಪಿಎ ಅವಧಿಯಲ್ಲಿ ಶೇ.6ರಷ್ಟು ಉದ್ಯೋಗ ಹೆಚ್ಚಳ, ಮೋದಿ ಅವಧಿಯಲ್ಲಿ ಶೇ.15ರಷ್ಟು ಹೆಚ್ಚುವರಿ ಉದ್ಯೋಗ ಸೃಷ್ಟಿ.

ಸೇವಾ ಕ್ಷೇತ್ರ:

ಯುಪಿಎ ಅವಧಿಯಲ್ಲಿ ಶೇ.25ರಷ್ಟು, ಎನ್‌ಡಿಎ ಅವಧಿಯಲ್ಲಿ ಶೇ.36ರಷ್ಟು ಪ್ರಗತಿ.

ನಿರುದ್ಯೋಗ ದರ:

2017-18ರಲ್ಲಿ ಶೇ.6ರಷ್ಟು ಇದ್ದ ನಿರುದ್ಯೋಗ ದರ 2023-24ರಲ್ಲಿ ಶೇ.3.2ಕ್ಕೆ ಇಳಿದಿದೆ. 2017-18ರಲ್ಲಿ ಶೇ. 46.8ರಷ್ಟಿದ್ದ ಉದ್ಯೋಗ ದರವು ಶೇ.58.2ಕ್ಕೆ ಏರಿಕೆ.

- ಸಿಂಗ್‌ ಕಾಲದಲ್ಲಿ 2.9 ಕೋಟಿ, ಮೋದಿ ಟೈಮಲ್ಲಿ 17 ಕೋಟಿ ನೌಕರಿ- 10 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ 36% ಏರಿಕೆ: ದಾಖಲೆ

ಸರ್ಕಾರ ಉದ್ಯೋಗ ಹೆಚ್ಚಳ ಪ್ರಮಾಣ% ಏರಿಕೆ

ಯುಪಿಎ ಅವಧಿ 47.15 ಕೋಟಿ 17 ಕೋಟಿ ಶೇ.36

ಮೋದಿ ಅವಧಿ 64.33 ಕೋಟಿ 2.9 ಕೋಟಿ ಶೇ.07