ಜಾಮೀನು ಅರ್ಜಿಗಳ ಇತ್ಯರ್ಥ 1 ದಿನ ತಡವಾದರೂ ಮೂಲಭೂತ ಹಕ್ಕಿಗೆ ಧಕ್ಕೆ : ಸುಪ್ರೀಂ ಕೋರ್ಟ್

| Published : Nov 10 2024, 01:49 AM IST / Updated: Nov 10 2024, 05:01 AM IST

ಸಾರಾಂಶ

ದೀರ್ಘಕಾಲದಿಂದ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡದೇ ಇರುವ ಅಧೀನ ನ್ಯಾಯಾಲಯಗಳ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಜಾಮೀನು ಪಡೆಯಲು 1 ದಿನ ತಡವಾದರೂ ಅದು ಜನರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀಡುತ್ತದೆ ಎಂದು ಚಾಟಿ ಬೀಸಿದೆ.

ನವದೆಹಲಿ: ದೀರ್ಘಕಾಲದಿಂದ ಜಾಮೀನು ಅರ್ಜಿಗಳನ್ನು ಇತ್ಯರ್ಥ ಮಾಡದೇ ಇರುವ ಅಧೀನ ನ್ಯಾಯಾಲಯಗಳ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಜಾಮೀನು ಪಡೆಯಲು 1 ದಿನ ತಡವಾದರೂ ಅದು ಜನರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀಡುತ್ತದೆ ಎಂದು ಚಾಟಿ ಬೀಸಿದೆ.

ನ್ಯಾ। ಬಿ.ಆರ್‌. ಗವಾಯಿ ಹಾಗೂ ಕೆ.ವಿ. ವಿಶ್ವನಾಥ್‌ ಅವರಿದ್ದ ಪೀಠ, ವೈಯುಕ್ತಿಕ ಸ್ವಾತಂತ್ರದ ಮಹತ್ವದ ಒತ್ತಿ ಹೇಳಿದ್ದು, ‘ನಾವು ವರ್ಷಗಳವರೆಗೆ ಜಾಮೀನು ಅರ್ಜಿ ಬಾಕಿ ಉಳಿಸಿಕೊಳ್ಳುವುದನ್ನು ಉತ್ತೇಜಿಸುವುದಿಲ್ಲ’ ಎಂದು ಹೇಳಿದೆ.

ಕಳೆದ ಆಗಸ್ಟ್‌ನಿಂದಲೂ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ತಮ್ಮ ಜಾಮೀನು ಅರ್ಜಿಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ. ಪ್ರತಿ ಬಾರಿಯೂ ಹೈಕೋರ್ಟ್‌ನಲ್ಲಿ ಪರಿಣಾಮಕಾರಿ ವಿಚಾರಣೆ ನಡೆಸದೆ ಜಾಮೀನು ಮುಂದೂಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಹೀಗೆ ಹೇಳಿದೆ.

ಈ ಪ್ರಕರಣವನ್ನು ಯಾರ ಮುಂದೆ ಬಂದಿದೆಯೋ ಅವರು ಅದೇ ದಿನ ಪ್ರಕರಣ ಕೈಗೆತ್ತಿಕೊಳ್ಳಬೇಕು. ಅಲ್ಲದೆ, ಸಾಧ್ಯವಾದಷ್ಟು ತ್ವರಿತವಾಗಿ ಮತ್ತು ನ.11ರಿಂದ 2 ವಾರಗಳ ಅವಧಿಯಲ್ಲಿ ಜಾಮೀನು ನಿರ್ಧರಿಸಲು ನಾವು ನ್ಯಾಯಾಧೀಶರನ್ನು ಕೋರುತ್ತೇವೆ ಎಂದು ಪೀಠ ಹೇಳಿತು.