ನಮ್ಮ ಹಿರಿಯರು ಬಹಳಷ್ಟು ಶ್ರಮಪಟ್ಟು ಸಮುದಾಯಕ್ಕಾಗಿ ಹಾಸ್ಟೆಲ್, ಸಮುದಾಯದ ಭವನ, ದೇವಾಲಯ ನಿರ್ಮಿಸಿ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ನೆರಳಿನಲ್ಲಿ ನಾವು ಮತ್ತಷ್ಟು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ತಿಳಿಸಿದ್ದಾರೆ
ಕನ್ನಡಪ್ರಭ ವಾರ್ತೆ ತುಮಕೂರು
ನಮ್ಮ ಹಿರಿಯರು ಬಹಳಷ್ಟು ಶ್ರಮಪಟ್ಟು ಸಮುದಾಯಕ್ಕಾಗಿ ಹಾಸ್ಟೆಲ್, ಸಮುದಾಯದ ಭವನ, ದೇವಾಲಯ ನಿರ್ಮಿಸಿ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಅವರ ನೆರಳಿನಲ್ಲಿ ನಾವು ಮತ್ತಷ್ಟು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರುಳಿಧರ ಹಾಲಪ್ಪ ತಿಳಿಸಿದ್ದಾರೆತುಮಕೂರು ತಾಲೂಕು ಲಿಂಗಾಪುರದಲ್ಲಿ ಉಪ್ಪಿನಕೊಳಗ ಒಕ್ಕಲಿಗ ಸೇವಾ ಸಮಾಜದ ವತಿಯಿಂದ ಆಯೋಜಿಸಿದ್ದ ಪ್ತತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಮ್ಮ ಪೊಷಕರಿಗಿಂತ ಹೆಚ್ಚು ಎತ್ತರಕ್ಕೆ ಬೆಳೆದರೆ ಹೆಚ್ಚು ಖುಷಿ ಪಡುವವರು ನಿಮ್ಮ ಪೊಷಕರು ಮಾತ್ರ. ಅಂತಹ ಹೆಮ್ಮೆ ತರುವ ಮಕ್ಕಳು ನೀವಾಗಿ, ಸಮಾಜದ ಅಭಿವೃದ್ದಿಯಲ್ಲಿ ನಿಮ್ಮ ಹೆಜ್ಜೆ ಗುರುತು ಮೂಡಿಸಿ ಎಂದು ಸಲಹೆ ನೀಡಿದರು.
ಪೌರಕಾರ್ಮಿಕನ ಮಗ ಇಂದು ಕರ್ನಾಟಕ ಸರಕಾರದ ಮುಜರಾಯಿ ಸಚಿವರಾಗಿದ್ದಾರೆ. ಅವರ ನಿರಂತರ ಪರಿಶ್ರಮ ಮತ್ತು ಅವರು ಗಳಿಸಿದ ವಿದ್ವತ್ತು ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಿದೆ, ನೀವು ಸಹ ಅವರ ರೀತಿಯಲ್ಲಿ ಸತತ ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಅಲಂಕರಿಸುವಾಗಬೇಕು. ಯುಪಿಎಸ್ ಸಿ, ಕೆಪಿಎಸ್ಸಿ ಪರೀಕ್ಷೆಗಳನ್ನು ಎದುರಿಸಿ, ಆಯಕಟ್ಟಿನ ಹುದ್ದೆಗಳಲ್ಕಿ ಕುಳಿತು ಜನಾಂಗಕ್ಕೆ ನೆರವಾಗಬೇಕೆಂದು ಮುರುಳೀಧರ ಹಾಲಪ್ಪ ಹಾರೈಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪಿ.ಎನ್.ಕೃಷ್ಣಮರಿತ ಮಾತನಾಡಿ, ಉಪ್ಪಿನಕೊಳಗ ಸಮುದಾಯದ ಏಳಿಗೆಗಾಗಿ ನನ್ನ ಕೈಲಾದ ಸಹಕಾರ ನೀಡುತ್ತಾ ಬಂದಿದ್ದೇನೆ. ರಾಜಕೀಯವಾಗಿ ಬೆಳೆಯಲು ಅವಕಾಶ ದೊರತು ಇನ್ನೇನು ಶಾಸಕರಾಗಬೇಕೆಂಬ ಹಂಬಲದಲ್ಲಿದ್ದಾಗ ದೊಡ್ಡವರ ಚಿತಾವಣೆಗೆ ಬಲಿಯಾಗಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಈ ಬಾರಿ ಮೀಸಲು ಬದಲಾಗಿ ಕೊರಟಗೆರೆ ವಿಧಾನಸಭಾ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾದರೆ ನಾನು ಸ್ಪರ್ಧಿಸುತ್ತಿದ್ದು, ಜನಾಂಗ ನನ್ನೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಉಪ್ಪಿನಕೊಳಗ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಜೆ.ಎನ್.ನರಸಿಂಹರಾಜು ಮಾತನಾಡಿ, ಸಮುದಾಯದ ಅಭಿವೃದ್ದಿಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಹಾಸ್ಟೆಲ್, ಸಮುದಾಯ ಭವನ, ಪತ್ತಿನ ಸಹಕಾರ ಸಂಘ, ದೇವಾಲಯ ನಿರ್ಮಿಸಲಾಗಿದೆ. ಅಲ್ಲದೆ ಕೊರಟಗೆರೆ ಪಟ್ಟಣದಲ್ಲಿ ಸಮುದಾಯಭವನ ನಿರ್ಮಾಣ ಕೈಗೊಳ್ಳಲಾಗಿದೆ. ಅಲ್ಲದೆ ಪ್ರತಿಭಾ ಪುರಸ್ಕಾರ ನಿಧಿ ಸಂಗ್ರಹಿಸುವ ಕೆಲಸ ನಡೆದಿದೆ. 25 ಸಾವಿರ ರು. ನೀಡುವ ಮೂಲಕ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರಕ್ಕೆ ದಾನಿಗಳಾಗುವಂತೆ ಮನವಿ ಮಾಡಿದರು. ಜನಾಂಗದ ಒಬ್ಬರೇ ಒಬ್ಬ ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲ. ಇಂದು ಪ್ರತಿಭಾ ಪುರಸ್ಕಾರಕ್ಕೆ ಬಾಜನರಾಗುತ್ತಿರುವ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಗಳಾಗಬೇಕೆಂಬ ಆಶಯ ವ್ಯಕ್ತ ಪಡಿಸಿದರು.ಸಾನ್ನಿಧ್ಯ ವಹಿಸಿದ್ದ ಕೆಂಗೇರಿ ವಿಶ್ವ ಒಕ್ಜಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಒಕ್ಕಲಿಗ ಸಮಾಜದ ಉಪ ಪಂಗಡಗಳು ತಮ್ಮ ಉಪಪಂಗಡ ಆಚರಣೆ ಮನೆಗೆ ಸಿಮೀತಗೊಳಿಸಿ, ಮನೆ ಹೊರಗೆ ಎಲ್ಲಾ ಒಕ್ಕಲಿಗರು ಒಗ್ಗೂಡಿದಾಗ ಮಾತ್ರ ಒಕ್ಕಲಿಗರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಒಕ್ಕಲಿಗರಿಗೆ ಇರುವುದು ಕೇವಲ ಶೇ 4 ಮೀಸಲಾತಿ ಮಾತ್ರ. ಅದನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಅಷ್ಟೇ ಅಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೂ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು.ಒಕ್ಕಲಿಗರ ಕೇಂದ್ರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಉಪ್ಪಿನಕೊಳಗ ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಎನ್.ಕೃಷ್ಣಮರ್ತಿ, ಬಿ.ಆರ್.ಜಯರಾಮ್, ವಿ.ಜಿ. ಶ್ರೀ ನಿವಾಸಮೂರ್ತಿ, ಕೊರಟಗೆರೆ ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿದರು.
ವೇದಿಕೆಯಲ್ಲಿ ಉಪ್ಪಿನಕೊಳಗ ಒಕ್ಕಲಿಗ ಸಮುದಾಯದ ಮುಖಂಡರಾದ ಡಿ.ಇ.ಮಲ್ಲಯ್ಯ, ಸಿ.ಆರ್. ಅಶ್ವಥನಾರಾಯಣ್, ಎಂ.ಬಾಲಕೃಷ್ಣ, ಟಿ.ವಿ.ದೊಡ್ಡಯ್ಯ, ಶೋಭಾ, ಕಮಲಮ್ಮ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಾ ಪುರಸ್ಕಾರ ಕರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ 140 ಮಕ್ಕಳನ್ನು ಗೌರವಿಸಲಾಯಿತು.