ಸಾರಾಂಶ
ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಮತ್ತು ಉತ್ಪಾದನೆ ಮಾಡುವ ಯೋಜನೆಯಾದ ಫೇಮ್ ಯೋಜನೆಗೆ ಈ ಬಾರಿಯ ಹಂಚಿಕೆಯನ್ನು ಶೇ.44ರಷ್ಟು ಕಡಿತ ಮಾಡಲಾಗಿದೆ. ಈ ಬಾರಿ 2671 ಕೋಟಿ ರು.ಗಳನ್ನು ಮಾತ್ರ ನೀಡಲಾಗಿದೆ.
ಈಗಾಗಲೇ 2 ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿದ್ದ ಫೇಮ್-2 ಯೋಜನೆಯನ್ನು ಮತ್ತೆ ವಿಸ್ತಣೆ ಮಾಡಲಾಗುತ್ತದೆಯೋ ಅಥವಾ ಹೊಸ ಯೋಜನೆ ಘೋಷಣೆ ಮಾಡಲಾಗುತ್ತದೋ ಎಂಬ ಅನುಮಾನದ ಬೆನ್ನಲ್ಲೇ ಸರ್ಕಾರ ಅನುದಾನ ಕಡಿತವನ್ನು ಸರ್ಕಾರ ಘೋಷಿಸಿದೆ.
2023-24ರಲ್ಲಿ 5171 ಕೋಟಿ ರು.ಗಳನ್ನು ಈ ಯೋಜನೆಗೆ ನೀಡಲಾಗಿತ್ತು. ಇದರಲ್ಲಿ 4807 ಕೋಟಿ ರು. ವೆಚ್ಚ ಮಾಡಲಾಗಿದೆ. ಕಳೆದ ವರ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆ ಮೇಲಿನ ಸಹಾಯಧನವನ್ನು ಕಡಿತ ಮಾಡಲಾಗಿತ್ತು.
ಇದೀಗ ಯೋಜನೆಯ ಅನುದಾನವನ್ನು ಸಹ ಕಡಿತ ಮಾಡಲಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಫೇಮ್-2 ಯೋಜನೆ 2024ರ ಮಾ.31ಕ್ಕೆ ಅಂತ್ಯವಾಗಲಿದೆ.
ಇದಾದ ಬಳಿಕ ಈ ಯೋಜನೆ ಮುಂದುವರೆಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಆರಂಭಿಸಿತ್ತು.