ಸಾರಾಂಶ
ಪಂಜಾಬ್ ಗಡಿ ಪ್ರದೇಶ ಖನೌರಿಯಲ್ಲಿ ಮತ್ತೆ ಪೊಲೀಸರು ಮತ್ತು ರೈತರ ನಡುವೆ ಗಲಭೆ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಖನೌರಿ/ಚಂಡೀಗಢ: ಹರ್ಯಾಣದ ಹಿಸಾರ್‌ನ ಖೇಡಿ ಚ್ವಾಪಾಟಾದಲ್ಲಿ ‘ದೆಹಲಿ ಚಲೋ’ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಶುಕ್ರವಾರ ಸಂಘರ್ಷ ನಡೆದಿದೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಹಿಸಾರ್- ನರ್ನಾಂಡ್ ರಸ್ತೆಯಲ್ಲಿರುವ ಖೇಡಿ ಚೋಪ್ಟಾ ಗ್ರಾಮದಿಂದ ರೈತರು ಖನೌರಿ ಗಡಿಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.
ಈ ವೇಳೆ ಭಾರೀ ಪ್ರಮಾಣದಲ್ಲಿ ನೆರೆದಿದ್ದ ರೈತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಆದರೂ ರೈತರನ್ನು ನಿಗ್ರಹಿಸಲಾದೆ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಆಗ ರೈತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು.