ಸಾರಾಂಶ
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆಯೊಂದಿಗೆ 1 ವರ್ಷದಿಂದ ಹರ್ಯಾಣ, ಪಂಜಾಬ್ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಜತೆಗಿನ 2ನೇ ಸುತ್ತಿನ ಸಂಧಾನ ಸಭೆ ಶನಿವಾರ ಸಕಾರಾತ್ಮಕವಾಗಿ ಮುಗಿದಿದೆ. ಮುಂದಿನ ಸಭೆ ಮಾ.19ಕ್ಕೆ ನಿಗದಿ ಆಗಿದೆ.
ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ರೂಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆಯೊಂದಿಗೆ 1 ವರ್ಷದಿಂದ ಹರ್ಯಾಣ, ಪಂಜಾಬ್ ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಜತೆಗಿನ 2ನೇ ಸುತ್ತಿನ ಸಂಧಾನ ಸಭೆ ಶನಿವಾರ ಸಕಾರಾತ್ಮಕವಾಗಿ ಮುಗಿದಿದೆ. ಮುಂದಿನ ಸಭೆ ಮಾ.19ಕ್ಕೆ ನಿಗದಿ ಆಗಿದೆ.
ಸಭೆಯಲ್ಲಿ ಕೇಂದ್ರದ ಪ್ರತಿನಿಧಿಗಳಾಗಿ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಹಾಗೂ ಪಡಿತರ ಸಚಿವ ಪ್ರಹ್ಲಾದ ಜೋಶಿ ಪಾಲ್ಗೊಂಡಿದ್ದರು.ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚೌಹಾಣ್, ‘ಚರ್ಚೆ ಚೆನ್ನಾಗಿತ್ತು. ರೈತರ ಕಲ್ಯಾಣದ ಬಗ್ಗೆ ಮೋದಿ ಸರ್ಕಾರದ ಆದ್ಯತೆಗಳನ್ನು ನಾವು ವಿವರಿಸಿದ್ದೇವೆ. ಈ ಬಗ್ಗೆ ರೈತ ನಾಯಕರ ಪ್ರತಿಕ್ರಿಯೆ ಕೇಳಿದ್ದೇವೆ. ಚರ್ಚೆ ಮುಂದುವರಿಯುತ್ತದೆ. ಮುಂದಿನ ಸಭೆ ಮಾ.19 ರಂದು ಚಂಡೀಗಢದಲ್ಲಿ ನಡೆಯಲಿದೆ’ ಎಂದರು.