ಫಾಸ್ಟ್ಯಾಗ್‌ ಇ-ಕೆವೈಸಿ ಮಾಡಿಸುವುದು ಹೇಗೆ? ಇಲ್ಲಿದೆ ನೋಡಿ

| Published : Jan 17 2024, 02:04 AM IST / Updated: Jan 17 2024, 11:57 AM IST

ಫಾಸ್ಟ್ಯಾಗ್‌ ಇ-ಕೆವೈಸಿ ಮಾಡಿಸುವುದು ಹೇಗೆ? ಇಲ್ಲಿದೆ ನೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ಫಾಸ್ಟ್ಯಾಗ್‌ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜ.31ರ ಒಳಗೆ ಎಲ್ಲ ವಾಹನಗಳ ಮಾಲೀಕರು ತಮ್ಮ ಫಾಸ್ಟ್ಯಾಗ್‌ ಕೆವೈಸಿ ಮಾಡಿಕೊಳ್ಳಲು ಗಡುವು ನೀಡಿದೆ.

ನವದೆಹಲಿ: ಫಾಸ್ಟ್ಯಾಗ್‌ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜ.31ರ ಒಳಗೆ ಎಲ್ಲ ವಾಹನಗಳ ಮಾಲೀಕರು ತಮ್ಮ ಫಾಸ್ಟ್ಯಾಗ್‌ ಕೆವೈಸಿ ಮಾಡಿಕೊಳ್ಳಲು ಗಡುವು ನೀಡಿದೆ.

ಇದರ ಭಾಗವಾಗಿ https://fastag.ihmcl.com ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಕೈವೈಸಿ ಮಾಡಿಕೊಳ್ಳಬಹುದಾಗಿದೆ. ಜೊತೆ ಇದೇ ವೆಬ್‌ಸೈಟ್‌ನಲ್ಲಿ ಇ ಕೆವೈಸಿ ಪರಿಶೀಲಿಸಿಕೊಳ್ಳುವ ಅವಕಾಶವಿದೆ.

ಪ್ರಕ್ರಿಯೆ:

1.) https://fastag.ihmcl.com ವೆಬ್‌ಸೈಟ್‌ ಭೇಟಿ ನೀಡಬೇಕು
2) ಅದರ ಮುಖಪುಟದಲ್ಲಿ ಕಾಣುವ ಲಾಗಿನ್ ಕೊಂಡಿಯಲ್ಲಿ ಮೊಬೈಲ್‌ ನಂಬರ್‌/ಒಟಿಪಿ ಅಥವಾ ಲಾಗಿನ್‌/ಪಾಸ್ವರ್ಡ್‌ ಬಳಸಿ ಲಾಗಿನ್‌ ಆಗಬೇಕು.
3) ಲಾಗಿನ್‌ ಆದೊಡನೆ, ಮೈ ಪ್ರೊಫೈಲ್‌ ಭಾಗದಲ್ಲಿ ‘ಇ ಕೆವೈಸಿ ಸ್ಥಿತಿಗತಿ’ ತಿಳಿದುಕೊಳ್ಳುವ ಕಾಲಂ ಇರುತ್ತದೆ.
4) ಒಂದು ವೇಳೆ ಈಗಾಗಲೇ ಕೆವೈಸಿ ಮಾಡಿದ್ದರೆ ಅದರ ಸ್ಥಿತಿಯನ್ನು ಈ ವೆಬ್‌ಸೈಟ್‌ನಲ್ಲೇ ತಿಳಿಯಬಹುದಾಗಿದೆ.
5) ಕೆವೈಸಿಯನ್ನು ಅಪ್‌ಡೇಟ್‌ ಮಾಡುವುದಾದರೆ, ಪಾಸ್ಪೋರ್ಟ್‌ ಸೈಜ್‌ ಫೋಟೋ, ವಾಹನದ ನೋಂದಣಿ ಕಾರ್ಡ್‌ (ಆರ್‌ಸಿ ಕಾರ್ಡ್‌), ಆಧಾರ್‌ ಕಾರ್ಡ್‌ ಬೇಕಾಗುತ್ತದೆ.
6) ಈ ದಾಖಲೆಗಳನ್ನು ಬಳಸಿ ಅದರಲ್ಲಿ ಅಪ್‌ಡೇಟ್‌ ಮಾಡಿ ಸಬ್‌ಮಿಟ್‌ ಮಾಡಿದರೆ ಇ ಕೆವೈಸಿ ಮುಕ್ತಾಯಗೊಳ್ಳಲಿದೆ.