ತೆಲಂಗಾಣದ ಅಶ್ವರಾವ್ ಪುರಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹರಿಬಾಬು
ಚುನಾವಣೆ ಗೆಲ್ಲಲು ಮತದಾರರಿಗೆ ನಗದು, ಕುಕ್ಕರ್ ಹಂಚಿಕೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿಆದರೆ ತನ್ನಿಂದ ಲಾಭ ಪಡೆದವರು, ತನಗೆ ಮತ ಹಾಕಿಲ್ಲ ಎಂದು ಹರಿಬಾಬುಗೆ ಭಾರೀ ಶಂಕೆ
ಹೀಗಾಗಿ ಸೋಲಿನ ಭೀತಿ. ತನಗೆ ಮತ ಹಾಕಿಲ್ಲ ಎಂಬ ಶಂಕಿತರಿಂದ ಕುಕ್ಕರ್ ವಾಪಸ್‌ಗೆ ಬೇಡಿಕೆಆದರೆ ಅಂತಿಮ ಫಲಿತಾಂಶ ಪ್ರಕಟವಾದಾಗ ಹರಿಬಾಬುಗೆ ಗೆಲುವು. ಸ್ವತಃ ಕಾಂಗ್ರೆಸ್ಸಿನಿಗೆ ಅಚ್ಚರಿ
==ಖಮ್ಮಂ: ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳು ಹಣ, ಮದ್ಯ, ಕುಕ್ಕರ್, ಮಿಕ್ಸರ್ ಹಂಚುವುದು ಕೆಲವು ನಡೆ ಮಾಮೂಲಿ. ಅಂಥದ್ದರಲ್ಲಿ ತೆಲಂಗಾಣದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆ ಚುನಾವಣೆಯ ವೇಳೆ ಸೋಲಿನ ಭೀತಿಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿಯೊಬ್ಬ, ಆಯ್ದ ಮತದಾರರಿಂದ ತಾನು ನೀಡಿದ್ದ ಹಣ, ಕುಕ್ಕರ್ ಮರಳಿ ಕೇಳಿದ ವಿಚಿತ್ರ ಘಟನೆ ನಡೆದಿದೆ. ಆದರೆ ಇನ್ನೂ ವಿಚಿತ್ರವೆಂದರೆ ಫಲಿತಾಂಶ ಪ್ರಕಟವಾದ ಬಳಿಕ ಆತ ಗೆಲುವಿನ ನಗೆ ಬೀರಿದ್ದಾನೆ.
ಆಗಿದ್ದೇನು?:
ಫೆ.11ರಂದು ಆಶ್ವರಾವ್‌ಪೇಟೆ ಪುರಸಭೆಗೆ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಂ. ಹರಿಬಾಬು ಪ್ರಚಾರದ ಸಮಯದಲ್ಲಿ ಹಣ ಮತ್ತು ಪ್ರೆಶರ್ ಕುಕ್ಕರ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಿದ್ದರು. ಆದರೆ ಮತ ಎಣಿಕೆಗೂ ಮುನ್ನ ಇದ್ದಕ್ಕಿದ್ದಂತೆ ಹರಿಬಾಬುಗೆ ಸೋಲಿನ ಆತಂಕ ಶುರುವಾಗಿತ್ತು. ತನಗೆ ಕೆಲ ವ್ಯಕ್ತಿಗಳು ಮತ ಚಲಾಯಿಸಿಲ್ಲ ಎಂಬ ಅನುಮಾನ ವ್ಯಕ್ತಪಡಿದ ಕಾಂಗ್ರೆಸ್ ಅಭ್ಯರ್ಥಿ, ಶಂಕೆ ಇರುವ 2500 ಮತದಾರರ ಬಳಿ, ತಾನು ನೀಡಿದ್ದ ಹಣ, ಕುಕ್ಕರ್ ಮರಳಿಸುವಂತೆ ಆಗ್ರಹಿಸಿದ್ದಾರೆ.ಇದರಿಂದ ರೋಸಿ ಹೋದ ಮತದಾರರು ಗುರುವಾರ, ‘ನಾವೇನೂ ನಿಮಗೆ ಕುಕ್ಕರ್, ಹಣ ಕೊಡು ಎಂದಿರಲಿಲ್ಲ. ಕೊಟ್ಟ ನಂತರ ಅವನ್ನು ವಾಪಸು ಕೇಳುವುದು ಸರಿಯೇ? ಈಗ ನಮ್ಮನ್ನು ಏಕೆ ಅವಮಾನಿಸಲಾಗುತ್ತಿದೆ? ಅಭ್ಯರ್ಥಿಯು ನಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ರಸ್ತೆಯ ಮಧ್ಯೆ ಅವನ್ನು ಇರಿಸಿ ಪ್ರತಿಭಟನೆ ಆರಂಭಿಸಿದ್ದರು. ಆಗ ಉದ್ವಿಗ್ನತೆ ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಮತದಾರರನ್ನು ಸಮಾಧಾನಪಡಿಸಿ ವಾಪಸು ಕಳಿಸಿದ್ದರು. ಕೆಲವು ವ್ಯಕ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದು ನಂತರ ಬಿಟ್ಟು ಕಳಿಸಿದ್ದರು.
ಆದರೆ ಅಂತಿಮವಾಗಿ ಫಲಿತಾಂಶ ಪ್ರಕಟ ನಡೆದ ಮತ ಎಣಿಕೆ ವೇಳೆ ಹರಿಬಾಬು ಗೆದ್ದಿದ್ದಾರೆ. ಅಶ್ವರಾವ್‌ಪೇಟೆ ಪುರಸಭೆಯ 21 ಸ್ಥಾನದಲ್ಲಿ ಕಾಂಗ್ರೆಸ್ 17ರಲ್ಲಿ ಜಯಿಸಿದೆ.ಆಮಿಷ ಒಡ್ಡಿದ್ದ ಬಗ್ಗೆ ಅಭ್ಯರ್ಥಿಯ ವಿರುದ್ಧ ಯಾರಾದರೂ ಆಮಿಷ ಒಡ್ಡಿದ ದೂರು ದಾಖಲಿಸಿದ್ದಾರೆಯೇ ಎಂಬುದು ದೃಢಪಡಿಸಿಲ್ಲ.