ಸಾರಾಂಶ
ಕಾಲ್ತುಳಿತ ಘಟನೆಯ ಕೆಲವೇ ನಿಮಿಷ ಮುನ್ನ ಭೋಲೆ ಬಾಬಾ ‘ಆಜ್ ಪ್ರಳಯ್ ಆಯೇಗಿ’ (ಇಂದು ಪ್ರಳಯ ಸಂಭವಿಸುತ್ತೆ’ ಎಂದಿದ್ದರು. ಅವರ ಮಾತಿನಂತೆಯೇ ಕಾಲ್ತುಳಿತ ಸಂಭವಿಸಿತು ಎಂದು ಗಾಯಾಳು ಭಕ್ತನೊಬ್ಬ ಹೇಳಿದ್ದಾನೆ.
ಹಾಥ್ರಸ್: ಕಾಲ್ತುಳಿತ ಘಟನೆಯ ಕೆಲವೇ ನಿಮಿಷ ಮುನ್ನ ಭೋಲೆ ಬಾಬಾ ‘ಆಜ್ ಪ್ರಳಯ್ ಆಯೇಗಿ ಇಂದು ಪ್ರಳಯ ಸಂಭವಿಸುತ್ತೆ’ ಎಂದಿದ್ದರು. ಅವರ ಮಾತಿನಂತೆಯೇ ಕಾಲ್ತುಳಿತ ಸಂಭವಿಸಿತು ಎಂದು ಗಾಯಾಳು ಭಕ್ತನೊಬ್ಬ ಹೇಳಿದ್ದಾನೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಬಾರ 15 ವರ್ಷದ ಅನುಯಾಯಿ ಕಮಲೇಶ್ ಮಾತನಾಡಿ, ‘ವೇದಿಕೆಯಿಂದ ಹೊರಡುವ ಮುನ್ನ, ಅವರು ಮತ್ತೆ ಮೈಕ್ ಹಿಡಿದು ‘ಅಬ್ ಮೈ ಜಾ ರಹಾ ಹೂಂ, ಆಜ್ ಪ್ರಳಯ್ ಆಯೇಗಿ‘ (ನಾನು ಈಗ ಹೊರಡುತ್ತಿದ್ದೇನೆ, ಪ್ರಳಯ ಆಗಲಿದೆ) ಎಂದು ಹೇಳಿದರು.
ಅವರು ಹೋಗುವವರೆಗೂ ಏನೂ ಆಗಿರಲಿಲ್ಲ. ಹೋದ ನಂತರ ಕಾಲ್ತುಳಿತ ನಡೆಯಿತು. ಬಾಬಾ ಅವರ ಮಾತಿನ ನಿಖರತಯನ್ನು ನೀವೇ ಊಹಿಸಿ. ಅವರಿಗೆ ಏನಾಗುತ್ತದೆ ಎಂಬುದು ನಿಖರವಾಗಿ ತಿಳಿದಿತ್ತು’ ಎಂದು ಹೇಳಿದ.