ಬಾಲಾಕೋಟ್‌ ದಾಳಿಯ ಕಥಾಹಂದರ ಹೊಂದಿರುವ ಫೈಟರ್‌ ಚಿತ್ರಕ್ಕೆಎ ಯುಎಇ ಹೊರತುಪಡಿಸಿ ಮಿಕ್ಕ ಕೊಲ್ಲಿ ರಾಷ್ಟ್ರಗಳು ನಿಷೇಧ ಹೇರಿವೆ.

ಮುಂಬೈ: ಪಾಕಿಸ್ತಾನದ ಬಾಲಾಕೋಟ್‌ ಮೇಲೆ ಭಾರತೀಯ ವಾಯು ಪಡೆದ ನಡೆಸಿದ ದಾಳಿಯ ಕಥೆ ಹೊಂದಿರುವ ಹೃತಿಕ್‌ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಫೈಟರ್‌’ ಚಿತ್ರಕ್ಕೆ ಯುಎಇ ಹೊರತುಪಡಿಸಿ ಮಿಕ್ಕೆಲ್ಲ ಕೊಲ್ಲಿ ರಾಷ್ಟ್ರಗಳು ನಿಷೇಧ ವಿಧಿಸಿದೆ.

ಚಿತ್ರದ ನಿಷೇಧಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಇದರಲ್ಲಿ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಒಂದಷ್ಟು ವಿವಾದಾತ್ಮಕ ಅಂಶಗಳಿವೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರವನ್ನು ವಯಕಾಂ- 18 ಸ್ಟುಡಿಯೋ ನಿರ್ಮಾಣ ಮಾಡಿದೆ.