ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಪಿಟಿಐ ನವದೆಹಲಿ

ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಸೋಮವಾರ ಈ ವಿಷಯ ತಿಳಿಸಿದ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು, ‘ಎಫ್‌ಡಿಐ ಮಿತಿಯನ್ನು ಶೇ.49 ಕ್ಕೆ ಹೆಚ್ಚಿಸಲು ಅಂತರ ಸಚಿವಾಲಯದ ಸಮಾಲೋಚನೆ ನಡೆಯುತ್ತಿದೆ. ಭಾರತದಂಥ ಬೃಹತ್‌ ದೇಶಕ್ಕೆ 3-4 ದೊಡ್ಡ ಬ್ಯಾಂಕುಗಳು ಬೇಕಾಗುತ್ತವೆ. ಹೀಗಾಗಿ ಬ್ಯಾಂಕುಗಳಿಗೆ ಬಂಡವಾಳ ಅಗತ್ಯವಾಗಿದೆ’ ಎಂದರು.

ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಎಫ್‌ಡಿಐ ಮಿತಿ ಕ್ರಮವಾಗಿ ಶೇ.20 ಮತ್ತು ಶೇ.74 ರಷ್ಟಿದೆ.

ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಶೇ.49 ರಷ್ಟು ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿಸಲಾಗಿದೆ ಮತ್ತು ಶೇ.49ಕ್ಕಿಂತ ಹೆಚ್ಚು ಮತ್ತು ಶೇ.74ರವರೆಗಿನ ಎಫ್‌ಡಿಐಗೆ ಸರ್ಕಾರದ ಅನುಮತಿ ಬೇಕಾಗುತ್ತದೆ.