ಸಾರಾಂಶ
ಪಶ್ಚಿಮ ದೆಹಲಿಯ ‘ಪಶ್ಚಿಮ ವಿಹಾರ್’ ಪ್ರದೇಶದ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ.
ನವದೆಹಲಿ: ಪಶ್ಚಿಮ ದೆಹಲಿಯ ‘ಪಶ್ಚಿಮ ವಿಹಾರ್’ ಪ್ರದೇಶದ ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಐ ಮಂತ್ರ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಏರ್ ಕಂಡಿಷನರ್‌ನ ವಾಲ್ ಫಿಕ್ಚರ್‌ಗಳು ಮತ್ತು ಲಾಸಿಕ್ ಲೇಸರ್ ಯಂತ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಸ್ಪತ್ರೆಯಲ್ಲಿದ್ದ ಜನರನ್ನು ಸುರಕ್ಷಿತವಾಗಿ ಕಟ್ಟಡದಿಂದ ಸ್ಥಳಾಂತರಿಸಿದ್ದಾರೆ. 6 ಅಗ್ನಿಶಾಮಕ ವಾಹನಗಳು ಸತತ 1 ಗಂಟೆ ಶ್ರಮಿಸಿದ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಎರಡು ದಿನಗಳ ಹಿಂದಷ್ಟೇ ಇದೇ ಪ್ರದೇಶದ ಖಾಸಗಿ ಆಸ್ಪತ್ರೆಯೊಂದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 7 ನವಜಾತ ಶಿಶುಗಳು ಸಾವನ್ನಪ್ಪಿದ್ದರು.ಗರ್ಭಿಣಿ ಸಾವಿಗೆ ಆಕ್ರೋಶ: ನರ್ಸ್‌ನ್ನೇ ಮಹಡಿಯಿಂದ ಎಸೆದ ಕುಟುಂಬಸ್ಥರು
ಪಟನಾ: ಹೊಟ್ಟೆ ನೋವಿನಿಂದ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯ ಕುಟುಂಬ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ. ಗುಡಿಯಾ ಕುಮಾರಿ ಎಂಬಾಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದರಿಂದ ಕೋಪಗೊಂಡು ಆಕೆಯ ಕುಟುಂಬಸ್ಥರು, ಸ್ಥಳೀಯರು ಆಸ್ಪತ್ರೆಯೊಳಗೆ ನುಗ್ಗಿ ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೇ ನರ್ಸ್ ನೀಡಿದ್ದ ಚುಚ್ಚು ಮುದ್ದಿನಿಂದ ಆಕೆ ಸಾವಾಯಿತು ಎಂದು ಆರೋಪಿಸಿ ನರ್ಸ್‌ನ್ನು ಮೊದಲನೇ ಮಹಡಿಯಿಂದ ತಳ್ಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನರ್ಸ್ ಪುನಂ ಕುಮಾರಿ (35) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.