ಸಾರಾಂಶ
ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಹಂದಿಯೊಂದರ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಅಮೆರಿಕದ ಮಸಾಚ್ಯುಸೆಟ್ಸ್ ರಾಜ್ಯದ ರಿಚರ್ಡ್ ಸ್ಲೇಮ್ಯಾನ್ (62) ಶಸ್ತ್ರಚಿಕಿತ್ಸೆಗೆ ಒಳಗಾದ ಕೇವಲ 2 ತಿಂಗಳಲ್ಲೇ ಸಾವನ್ನಪ್ಪಿದ್ದಾರೆ.
ನ್ಯೂಯಾರ್ಕ್: ಪ್ರಪಂಚದಲ್ಲೇ ಮೊಟ್ಟಮೊದಲ ಬಾರಿಗೆ ಹಂದಿಯೊಂದರ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಅಮೆರಿಕದ ಮಸಾಚ್ಯುಸೆಟ್ಸ್ ರಾಜ್ಯದ ರಿಚರ್ಡ್ ಸ್ಲೇಮ್ಯಾನ್ (62) ಶಸ್ತ್ರಚಿಕಿತ್ಸೆಗೆ ಒಳಗಾದ ಕೇವಲ 2 ತಿಂಗಳಲ್ಲೇ ಸಾವನ್ನಪ್ಪಿದ್ದಾರೆ.
ಆದರೆ ಸ್ಲೇಮ್ಯಾನ್ ಸಾವನ್ನಪ್ಪಿದ್ದಕ್ಕೆ ಹಂದಿ ಮೂತ್ರಪಿಂಡ ಕಸಿಯೇ ಕಾರಣವಲ್ಲ ಎಂಬುದಾಗಿ ಅವರಿಗೆ ಚಿಕಿತ್ಸೆ ನೀಡಿ ಮಸಾಚ್ಯುಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ಘೋಷಿಸಿದ್ದಾರೆ. ಈ ನಡುವೆ ಸ್ಲೇಮ್ಯಾನ್ ಸಾವನ್ನಪ್ಪಿದರೂ ಲಕ್ಷಾಂತರ ಜನರಿಗೆ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದು ಅವರ ಕುಟುಂಬ ಹೇಳಿದೆ.
ಟೈಪ್-2 ಡಯಾಬಿಟೀಸ್, ರಕ್ತದೊತ್ತಡ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಿಚರ್ಡ್ ಸ್ಲೇಮ್ಯಾನ್ ಅವರಿಗೆ 2018ರಲ್ಲಿ ಮಾನವನ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಆದರೆ ಅದು 2023ರಲ್ಲಿ ಕೆಲಸ ನಿಲ್ಲಿಸಿದ ಕಾರಣ ಅವರು ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದರು.
ಈ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಅವರಿಗೆ ಹಂದಿ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಇದು ವಿಶ್ವದಲ್ಲೇ ಮೊದಲ ಪ್ರಯತ್ನವಾಗಿತ್ತು. ಇದು ಯಶಸ್ವಿಯಾಗಿದ್ದ ಕಾರಣ, ಮೂತ್ರಪಿಂಡ ಕಸಿಗೆ ಅಗತ್ಯವಾದ ಮಾನವ ಮೂತ್ರಪಿಂಡ ಸಿಗದೇ ತೊಂದರೆ ಒಳಗಾದವರಿಗೆ ಹೊಸ ಆಶಾಕಿರಣವಾಗಿ ಗೋಚರಿಸಿತ್ತು.