ಉತ್ತರಾಖಂಡ ಪ್ರವಾಹ : 3 ಅಂತಸ್ತಿನ ಕಟ್ಟಡದಷ್ಟು ಎತ್ತರ ಅವಶೇಷ ರಾಶಿ!

| N/A | Published : Aug 09 2025, 01:12 AM IST / Updated: Aug 09 2025, 04:14 AM IST

ಸಾರಾಂಶ

ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ.

ಧರಾಲಿ: ಉತ್ತರಾಖಂಡದ ಧರಾಲೀ ಎಂಬಲ್ಲಿ ಪ್ರವಾಹವು ಭಯಂಕರ ಸನ್ನಿವೇಶವನ್ನು ಸೃಷ್ಟಿಸಿದ್ದು, ಅವಶೇಷಗಳು 3 ಅಂತಸ್ತಿನ ಕಟ್ಟಡಗಳಷ್ಟು ಎತ್ತರ ರಾಶಿ ಬಿದ್ದಿವೆ. ಅಂದರೆ ಸುಮಾರು ಸುಮಾರು 50 ಅಡಿಯಷ್ಟು ಕಲ್ಲು, ಮಣ್ಣು, ಕುಸಿದ ಮನೆಯ ಅವಶೇಷಗಳು ಕಂಡುಬಂದಿವೆ. ಈ ಅವಶೇಷದಡಿ ಸಿಲುಕಿದವರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವರ ಶೋಧಕ್ಕೆ ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ. ಅವಶೇಷಗಳು ಭಾರೀ ಪ್ರಮಾಣದಲ್ಲಿ ಇರುವುದರಿಂದ ಇದು ಸವಾಲಾಗಿ ಪರಿಣಮಿಸಿದೆ. ಇವುಗಳಲ್ಲಿ ಶವ ಇರುವ ಸಂದೇಹವೂ ಇಚೆ.

ಈ ಬಗ್ಗೆ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಐಜಿ ಅರುಣ್‌ ಮೋಹನ್‌ ಜೋಶಿ, ‘ಇದು ಸಾಮಾನ್ಯ ಕಾರ್ಯಾಚರಣೆಯಲ್ಲ. ಮನೆಗಳ ಛಾವಣಿಗಳು ಇರುವಷ್ಟು ಎತ್ತರ ಅವಶೇಷಗಳು ಬಿದ್ದಿವೆ’ ಎಂದರು. ಇಡೀ ಧರಾಲೀಯನ್ನು ಮೊದಲಿನಂತೆ ಮಾಡಲು ಕನಿಷ್ಠ 7 ತಿಂಗಳಾದರೂ ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read more Articles on