ಸಾರಾಂಶ
ಪಾಕಿಸ್ತಾನದಲ್ಲಿ ಕಂಡು ಕೇಳರಿಯದ ಪ್ರವಾಹದ ಮಧ್ಯೆ ಅಲ್ಲಿನ ರಕ್ಷಣಾ ಸಚಿವ ಬಾಲಿಷ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಜನರು ಪ್ರವಾಹವನ್ನು ವರವಂತೆ ಕಾಣಬೇಕು. ನೆರೆ ನೀರನ್ನು ಸುಮ್ಮನೆ ಹೊರಗೆ ಹೋಗಲು ಬಿಡಬೇಡಿ. ಅದನ್ನು ಟಬ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ’ ಎಂದು ಖ್ವಾಜಾ ಆಸಿಫ್ ಸಲಹೆ ನೀಡಿದ್ದಾರೆ.
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಂಡು ಕೇಳರಿಯದ ಪ್ರವಾಹದ ಮಧ್ಯೆ ಅಲ್ಲಿನ ರಕ್ಷಣಾ ಸಚಿವ ಬಾಲಿಷ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಜನರು ಪ್ರವಾಹವನ್ನು ವರವಂತೆ ಕಾಣಬೇಕು. ನೆರೆ ನೀರನ್ನು ಸುಮ್ಮನೆ ಹೊರಗೆ ಹೋಗಲು ಬಿಡಬೇಡಿ. ಅದನ್ನು ಟಬ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ’ ಎಂದು ಖ್ವಾಜಾ ಆಸಿಫ್ ಸಲಹೆ ನೀಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಆಸಿಫ್, ‘ಜನರು ಪ್ರವಾಹವನ್ನು ನಷ್ಟವೆಂಬಂತೆ ಭಾವಿಸಬಾರದು. ಕೆಳ ಪ್ರದೇಶಗಳಲ್ಲಿ ನೆಲೆಸಿರುವ ಜನರು ನೀರು ತಮ್ಮ ಮನೆಗೆ ಬಂದಾಗ, ಅದನ್ನು ಟನ್, ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ಮುಂದೆ ಉಪಯೋಗಕ್ಕೆ ಬರುತ್ತದೆ’ ಎಂದಿದ್ದಾರೆ. ಜತೆಗೆ ನಾವು ದೊಡ್ಡ ಡ್ಯಾಂಗಳಿಗೆ 10-15 ವರ್ಷಗಳ ಕಾಲ ಕಾಯುವ ಬದಲಿಗೆ, ಚಿಕ್ಕ ಡ್ಯಾಂಗಳನ್ನು ನಿರ್ಮಿಸಬೇಕು ಎಂದಿದ್ದಾರೆ.