ಭಾರತೀಯರ ಪ್ರತಿಭೆ ಬಗ್ಗೆ ವಿದೇಶಗಳಿಗೆ ಭಯ: ಗೋಯಲ್‌

| Published : Sep 22 2025, 01:03 AM IST

ಸಾರಾಂಶ

ಹಲವು ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಲು ಬಯಸುತ್ತವೆ. ಆದರೆ ಅವರಿಗೆ ನಮ್ಮ ಪ್ರತಿಭೆಯ ಬಗ್ಗೆ ಭಯವಿದೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಎಚ್‌1ಬಿ ವೀಸಾ ವಿವಾದದ ಬೆನ್ನಲ್ಲೇ ಹೇಳಿದ್ದಾರೆ.

ನವದೆಹಲಿ: ಹಲವು ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಲು ಬಯಸುತ್ತವೆ. ಆದರೆ ಅವರಿಗೆ ನಮ್ಮ ಪ್ರತಿಭೆಯ ಬಗ್ಗೆ ಭಯವಿದೆ ಎಂದು ಕೇಂದ್ರ ಸಚಿವ ಪೀಯೂಷ್‌ ಗೋಯಲ್‌ ಎಚ್‌1ಬಿ ವೀಸಾ ವಿವಾದದ ಬೆನ್ನಲ್ಲೇ ಹೇಳಿದ್ದಾರೆ.

ಸಭೆಯೊಂದರಲ್ಲಿ ಮಾತನಾಡಿದ ಅವರು,‘ಪ್ರಪಂಚದಾದ್ಯಂತ ವಿವಿಧ ದೇಶಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಲು ಬಯಸುತ್ತವೆ. ಭಾರತದೊಂದಿಗೆ ವ್ಯಾಪಾರವನ್ನು ಹೆಚ್ಚಿಸಲು ಇಷ್ಟಪಡುತ್ತವೆ. ಸಂಬಂಧ ಸುಧಾರಿಸಿಕೊಳ್ಳಲು ಯತ್ನಿಸುತ್ತವೆ. ಆದರೆ ಅವರಿಗೆ ನಮ್ಮ ದೇಶದಲ್ಲಿರುವ ಪ್ರತಿಭೆಗಳ ಬಗ್ಗೆ ಭಯವೂ ಇದೆ. ಆದರೆ ಇದಕ್ಕೆ ನಮ್ಮ ಆಕ್ಷೇಪವಿಲ್ಲ’ ಎಂದರು.

-----

ಎಚ್‌ 1 ಬಿ ವೀಸಾ ದರ ಹೆಚ್ಚಳ ಬೆನ್ನಲ್ಲೇ ಗೋಯಲ್ ನೇತೃತ್ವದ ನಿಯೋಗ ಸೋಮವಾರ ಅಮೆರಿಕಗೆ ತೆರಳಲಿದ್ದಾರೆ. ಅದಕ್ಕೂ ಮುನ್ನ ಭಾರತೀಯ ಯುವ ಉದ್ಯೋಗಿಗಳಿಗೆ ಅವರು, ‘ ಭಾರತಕ್ಕೆ ಬಂದು ಇಲ್ಲೇ ಹೊಸತನ್ನು ಕಂಡುಕೊಳ್ಳಿ. ಅದು ಆರ್ಥಿಕತೆಯನ್ನು ಇನ್ನಷ್ಟು ವೇಗವಾಗಿ ಬೆಳೆಯುವಂತೆ ಮಾಡುತ್ತದೆ’ ಎಂದು ಇದೇ ವೇಳೆ ಹೇಳಿದರು.