ಸಾರಾಂಶ
ಉಭಯ ದೇಶಗಳ ನಡುವಿನ ರಾಜಕೀಯ ನಾಯಕರ ವಾಕ್ಸಮರ ಮುಂದುವರೆದಿರುವ ಹೊತ್ತಿನಲ್ಲೇ, ಮುಂದಿನ ನವೆಂಬರ್ ವೇಳೆಗೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ನವದೆಹಲಿ: ಉಭಯ ದೇಶಗಳ ನಡುವಿನ ರಾಜಕೀಯ ನಾಯಕರ ವಾಕ್ಸಮರ ಮುಂದುವರೆದಿರುವ ಹೊತ್ತಿನಲ್ಲೇ, ಮುಂದಿನ ನವೆಂಬರ್ ವೇಳೆಗೆ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ವರ್ಚ್ಯುವಲ್ ಆಗಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಅವರು, ‘ ಅಮೆರಿಕ- ಭಾರತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳು ಶೀಘ್ರದಲ್ಲೇ ಹಳಿಗೆ ಬರುತ್ತವೆ. ಫೆಬ್ರವರಿಯಲ್ಲಿ ಉಭಯ ದೇಶಗಳ ನಾಯಕರು ಚರ್ಚಿಸಿದಂತೆ ನವೆಂಬರ್ ಅಥವಾ ಅದಕ್ಕಿಂತ ಮೊದಲು ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಮುಕ್ತಾಯಗೊಳಿಸುತ್ತೇವೆ’ ಎಂದಿದ್ದಾರೆ. ಜೊತೆಗೆ, ‘ಅಮೆರಿಕದ ಜತೆಗೆ ನಮ್ಮ ಮಾತುಕತೆಗಳಲ್ಲಿ ವ್ಯಾಪಾರ ಸಮಸ್ಯೆಗಳಿಗಿಂತ ನಾವು ಸ್ವಲ್ಪ ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ಎದುರಿಸಿದ್ದೇವೆ’ ಎಂದರು.