ಕೇಂದ್ರ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡುವ ಲೋಕಪಾಲ ಸಂಸ್ಥೆ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ। ಎ.ಎಂ. ಖಾನ್ವಿಲ್ಕರ್‌ ನೇಮಕಗೊಂಡಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡುವ ಲೋಕಪಾಲ ಸಂಸ್ಥೆ ಮುಖ್ಯಸ್ಥರಾಗಿ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ। ಎ.ಎಂ. ಖಾನ್ವಿಲ್ಕರ್‌ ನೇಮಕಗೊಂಡಿದ್ದಾರೆ.

ಇವರೊಂದಿಗೆ ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ನ್ಯಾ। ಲಿಂಗಪ್ಪ ನಾರಾಯಣ ಸ್ವಾಮಿ, ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಾಧೀಶ ನ್ಯಾ। ರಿತುರಾಜ್‌ ಅವಸ್ಥಿ ಹಾಗೂ ನ್ಯಾ।ಸಂಜಯ್‌ ಯಾದವ್‌ ಅವರನ್ನು ನ್ಯಾಯಾಂಗ ಸದಸ್ಯರಾಗಿ ನೇಮಿಸಲಾಗಿದೆ.

ಇನ್ನು ನ್ಯಾಯಾಂಗೇತರ ಸದಸ್ಯರಾಗಿ ಸುಶೀಲ್ ಚಂದ್ರ, ಪಂಕಜ್‌ ಕುಮಾರ್‌ ಹಾಗೂ ಅಜಯ್‌ ತಿರ್ಕೆರನ್ನು ನೇಮಕ ಮಾಡಿ ರಾಷ್ಟ್ರಪತಿ ಭವನ ಆದೇಶಿಸಿದೆ. ಈ ಹಿಂದೆ ಪ್ರದೀಪ್‌ ಕುಮಾರ್‌ ಮೊಹಂತಿ ಮುಖ್ಯಸ್ಥರಾಗಿದ್ದರು.