ಸಾರಾಂಶ
ವಕೀಲಿಕೆ ಅನುಭವವಿಲ್ಲದೇ ಜಡ್ಜ್ ಆಗಲು ಸಾಧ್ಯವಿಲ್ಲ: ಸುಪ್ರೀಂ
ಕನಿಷ್ಠ 10 ವರ್ಷ ವಕೀಲರಾಗಿದ್ದವರ ಬಳಿ ಪ್ರ್ಯಾಕ್ಟೀಸ್ ಕಡ್ಡಾಯ==
ಸುಪ್ರೀಂ ಹೇಳಿದ್ದೇನು?ಜಡ್ಜ್ ಹುದ್ದೆಗೆ ಕಾನೂನು ಪದವೀಧರರ ನೇಮಕ ಹಲವು ತೊಂದರೆ ಸೃಷ್ಟಿಸಿದೆ
ಇದು ನ್ಯಾಯಾಂಗದ ದಕ್ಷತೆಯಲ್ಲಿ ಪ್ರಾಯೋಗಿಕ ಅನುಭವದ ಅಗತ್ಯ ಸಾರಿದೆಹೀಗಾಗಿ ಜಡ್ಜ್ ಆಗಲು ಕನಿಷ್ಠ 3 ವರ್ಷಗಲ ವಕೀಲಿಕೆ ನಡೆಸಿರುವುದು ಕಡ್ಡಾಯ
ಇಂಥ ವಕೀಲಿಕೆ 10 ವರ್ಷ ಅನುಭವ ಇರುವ ವಕೀಲರ ಬಳಿ ನಡೆಸಿರಬೇಕುಈ ಅನುಭವ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟ, ಸಿದ್ಧತೆಗೆ ನೆರವಾಗುತ್ತದೆ
==ಪಿಟಿಐ ನವದೆಹಲಿಹೊಸದಾಗಿ ಕಾನೂನು ಪದವಿ ಪಡೆದವರು ಕನಿಷ್ಠ 3 ವರ್ಷಗಳ ಕಾನೂನು ವೃತ್ತಿಯನ್ನು (ವಕೀಲಿಕೆಯನ್ನು) ಪೂರ್ಣಗೊಳಿಸದೆ ನ್ಯಾಯಾಂಗ ಸೇವೆಗಳ (ಜಡ್ಜ್) ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಈ ಮೂಲಕ ಆರಂಭಿಕ ಹಂತದ ಹುದ್ದೆಗಳಿಗೆ (ಸಿವಿಲ್ ಜಡ್ಜ್ ಹುದ್ದೆಗೆ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 3 ವರ್ಷಗಳ ವಕೀಲಿ ವೃತ್ತಿಯ ಅನುಭವವನ್ನು ಕಡ್ಡಾಯಗೊಳಿಸಿದೆ. ಈ ತೀರ್ಪು ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿಜೀವನಕ್ಕೆ ಸಿದ್ಧತೆ ನಡೆಸುತ್ತಿರುವವರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.ಆರಂಭಿಕ ಹಂತದ ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಮತ್ತು ಸುಧಾರಣೆಯನ್ನು ಕೋರಿ ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಮತ್ತು ನ್ಯಾ. ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು ಈ ತೀರ್ಪು ನೀಡಿದೆ.
ಅನುಭವ ಮುಖ್ಯ:ಭವಿಷ್ಯದ ನ್ಯಾಯಾಧೀಶರಿಗೆ ನ್ಯಾಯಾಲಯದ ಅನುಭವದ ಮಹತ್ವವನ್ನು ಪೀಠವು ತೀರ್ಪಿನ ವೇಳೆ ಒತ್ತಿ ಹೇಳಿದೆ. ‘ಹಲವಾರು ಹೈಕೋರ್ಟ್‌ಗಳು ಗಮನಿಸಿದಂತೆ, ಹೊಸ ಕಾನೂನು ಪದವೀಧರರ ನೇಮಕಾತಿಯು (ಜಡ್ಜ್ ಹುದ್ದೆಗೆ ನೇಮಕಾತಿ) ಅನೇಕ ತೊಂದರೆಗಳನ್ನು ಸೃಷ್ಟಿಸಿದೆ. ನ್ಯಾಯಾಂಗ ದಕ್ಷತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಪ್ರಾಯೋಗಿಕ ಅನುಭವ ಅತ್ಯಗತ್ಯ’ ಎಂದಿದೆ.
ಕನಿಷ್ಠ 3 ವರ್ಷಗಳ ಕಾನೂನು ಅಭ್ಯಾಸದ ಅವಶ್ಯಕತೆಯು ತಳಮಟ್ಟದಲ್ಲಿ ನ್ಯಾಯಾಂಗ ಅಧಿಕಾರಿಗಳ ಗುಣಮಟ್ಟ ಮತ್ತು ಸಿದ್ಧತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆರಂಭಿಕ ಹಂತದ ಜಡ್ಜ್ ಆಗಲು ಕನಿಷ್ಠ 3 ವರ್ಷಗಳ ಅನುಭವ ಕಡ್ಡಾಯವಾಗಿದೆ ಎಂದು ಪೀಠ ಹೇಳಿದೆ.ಷರತ್ತುಗಳು:
ತೀರ್ಪಿನ ಪ್ರಕಾರ, 3 ವರ್ಷಗಳ ವಕೀಲಿಕೆ ವೃತ್ತಿಯನ್ನು ಕನಿಷ್ಠ 10 ವರ್ಷ ವಕೀಲರಾಗಿ ಸೇವೆ ಸಲ್ಲಿಸಿದವರ ಬಳಿ ಮಾಡಬೇಕು ಹಾಗೂ ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸುವಾಗ 10 ವರ್ಷ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣಪತ್ರವನ್ನು ಒದಗಿಸಬೇಕು.ಇನ್ನು ಜಡ್ಜ್‌ಗಳ ಗುಮಾಸ್ತರಾಗಿ ನೇಮಕ ಆದವರು, ಗುಮಾಸ್ತ ಹುದ್ದೆ ವಹಿಸಿಕೊಳ್ಳುವ ಮುನ್ನ ಕನಿಷ್ಠ 1 ವರ್ಷದ ತರಬೇತಿ ಪಡೆದಿರಬೇಕು ಎಂದು ಕೋರ್ಟ್ ಸೂಚಿಸಿದೆ.