ಸಾರಾಂಶ
ರಾಜ್ಯ ಸರ್ಕಾರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಆದರೆ, ಅವರು ಅನರ್ಹ ಆಗಿದ್ದರೆ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ ಕೊಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ.
ಶಿವಮೊಗ್ಗ : ರಾಜ್ಯ ಸರ್ಕಾರ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ. ಆದರೆ, ಅವರು ಅನರ್ಹ ಆಗಿದ್ದರೆ ಎಪಿಎಲ್ ಕಾರ್ಡ್ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ ಕೊಡಲು ಕರ್ನಾಟಕ ಸರ್ಕಾರ ತೀರ್ಮಾನ ಮಾಡಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಅಕ್ಕಿಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ. ಇತ್ತೀಚೆಗೆ ಅಕ್ಕಿಯ ಉಪಯೋಗ ಕಡಿಮೆಯಾಗಿದೆ ಎಂದು ತಿಳಿದುಬಂತು. ಅಷ್ಟೇ ಅಲ್ಲದೇ, ಅಕ್ಕಿ ಕಾಳಸಂತೆಗೂ ಹೋಗುವುದು ತಿಳಿಯಿತು. ಹೀಗಾಗಿ ಅಕ್ಕಿ ಬದಲಾಗಿ ಬೇರೆ ಬೇರೆ ಧಾನ್ಯ ಕೊಡಲು ತೀರ್ಮಾನ ಮಾಡಿದ್ದೇವೆ.
ಮುಂದಿನ ಒಂದೆರಡು ತಿಂಗಳಲ್ಲೇ ಟೆಂಡರ್
ಮುಂದಿನ ಒಂದೆರಡು ತಿಂಗಳಲ್ಲೇ ಟೆಂಡರ್ ಕರೆದು ಕೊಡುತ್ತೇವೆ. ರಾಗಿ, ಬೇಳೆ, ಎಣ್ಣೆಯನ್ನು ತೂಕ ಹಾಗೂ ಗುಣಮಟ್ಟದಂತೆ ನೀಡುತ್ತೇವೆ. ಆ ಮೂಲಕ ಪ್ರತಿ ಕುಟುಂಬಕ್ಕೆ ಪೌಷ್ಟಿಕ ಆಹಾರ ಕೊಡ್ತೇವೆ ಎಂದು ತಿಳಿಸಿದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))