ಸಾರಾಂಶ
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಡೆಟ್ (ಬಿಎಸ್ಸೆನ್ನೆಲ್) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್ ರವಿ ಹೇಳಿದ್ದಾರೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಡೆಟ್ (ಬಿಎಸ್ಸೆನ್ನೆಲ್) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್ ರವಿ ಹೇಳಿದ್ದಾರೆ.
ಇತ್ತೀಚೆಗೆ ಜಿಯೋ, ಏರ್‌ಟೆಲ್, ವೊಡಾಫೋನ್‌ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, ‘ನಮಗೆ ಗ್ರಾಹಕರ ಸಂತೋಷ ಮುಖ್ಯ. ಹೀಗಾಗಿ ಸದ್ಯೋಭವಿಷ್ಯದಲ್ಲಿ ದರ ಏರಿಕೆ ಇಲ್ಲ’ ಎಂದಿದ್ದಾರೆ. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಇದ್ದಾರೆ.--
ಬಿಎಸ್ಸೆನ್ನೆಲ್ ಹೊಸ ಲೋಗೋ ಬಿಡುಗಡೆನವದೆಹಲಿ: ಮಂಗಳವಾರ ಬಿಸ್‌ಎನ್ಎಲ್ ಹೊಸ ಲೋಗೋ ಬಿಡುಗಡೆ ಮಾಡಲಾಯಿತು. ಹೊಸ ಲೋಗೋದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಬಳಸಲಾಗಿದೆ.
ಅಲ್ಲದೆ, ಮಂಗಳವಾರದಿಂದ ಬಿಎಸ್ಸೆನ್ನೆಲ್ 7 ಹೊಸ ಸೇವೆ ಪರಿಚಯಿಸಿದೆ. ಇದರಲ್ಲಿ ಆಟೋಮೇಟೆಡ್ ಸಿಮ್ ಕಿಯೋಸ್ಕ್ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಅಪ್‌ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. ಕ್ಯುಆರ್ ಕೋಡ್‌ನಲ್ಲೇ ಪೇಮೆಂಟ್ ಮಾಡಬಹುದು.