ಸಾರಾಂಶ
ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ ಯೋಜನೆ ಸಂಪೂರ್ಣ ರದ್ದುಗೊಳಿಸುವ ಬದಲು ಸುಧಾರಿಸಬೇಕಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ ಯೋಜನೆ ಸಂಪೂರ್ಣ ರದ್ದುಗೊಳಿಸುವ ಬದಲು ಸುಧಾರಿಸಬೇಕಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾದ ಒಂದು ರಾಷ್ಟ್ರ, ಒಂದು ಚುನಾವಣೆ ಕಾರ್ಯಗತಗೊಳಿಸಲು ಚುನಾವಣಾ ಬಾಂಡ್ ಯೋಜನೆ ಅಭಿವೃದ್ಧಿಗೆ ಸಹಾಯವಾಗುತ್ತಿತ್ತು.
ಕಪ್ಪುಹಣದ ಪ್ರಭಾವ ಕೊನೆಗೊಳಿಸಲು ಚುನಾವಣಾ ಬಾಂಡ್ ಪರಿಚಯಿಸಲಾಗಿದೆ. ಬಿಜೆಪಿ 303 ಸಂಸದರನ್ನು ಹೊಂದಿದ್ದರೂ ₹ 6,000 ಕೋಟಿ ಪಡೆದಿದೆ. ಆದರೆ ಉಳಿದವರು 242 ಸಂಸದರ ಪರವಾಗಿ ₹ 14,000 ಕೋಟಿ ಪಡೆದಿದ್ದಾರೆ ಎಂದು ವಿಪಕ್ಷಗಳನ್ನು ಕುಟುಕಿದರು.