ಸಾರಾಂಶ
ಐಎಎನ್‌ಎಸ್ ಸಂಸ್ಥೆಯಲ್ಲಿ ಶೇ.50.5ರಷ್ಟು ಷೇರು ಹೊಂದಿದ್ದ ಅದಾನಿ, ಇತ್ತೀಚೆಗೆ ಶೇ.25.5 ಷೇರುಗಳನ್ನು ಖರೀದಿದ್ದಾರೆ. ಇದರೊಂದಿಗೆ ಒಟ್ಟಾರೆ ಶೇ.76ರಷ್ಟು ಷೇರು ಖರೀದಿಸಿದ ಅದಾನಿ ಸಂಸ್ಥೆಯ ಮಾಲೀಕತ್ವ ಹೊಂದಿದ್ದಾರೆ. ಈ ಮೂಲಕ ಎನ್‌ಡಿಟಿವಿ ಬಳಿಕ ಮತ್ತೊಂದು ಸುದ್ದಿಸಂಸ್ಥೆಯ ಒಡೆತನ ಹೊಂದಿದ್ದಾರೆ.
ನವದೆಹಲಿ: ಐಎಎನ್‌ಎಸ್ ಸುದ್ದಿಸಂಸ್ಥೆಯಲ್ಲಿ ಮತ್ತಷ್ಟು ಷೇರುಗಳನ್ನು ಖರೀದಿಸುವ ಮೂಲಕ ಭಾರತದ ನಂ.1 ಶ್ರೀಮಂತ, ಉದ್ಯಮಿ ಗೌತಮ್ ಅದಾನಿ ಇದರ ಮಾಲೀಕತ್ವವನ್ನು ಸಂಪಾದಿಸಿದ್ದಾರೆ. ಇದರೊಂದಿಗೆ ಎನ್‌ಡಿಟೀವಿ ಬಳಿಕ ಇನ್ನೊಂದು ಮಾಧ್ಯಮವು ಅದಾನಿ ಪಾಲಾಗಿದೆ.
ಅದಾನಿ ಗ್ರೂಪ್ ಈ ಮೊದಲು ಐಎಎನ್ಎಸ್‌ನಲ್ಲಿ ಶೇ.50.50ರಷ್ಟು ಷೇರುಗಳನ್ನು ಹೊಂದಿತ್ತು. ಈಗ ಹೆಚ್ಚುವರಿ ಶೇ.25.5ರಷ್ಟು ಷೇರುಗಳನ್ನು ಕಂಪನಿ ಖರೀದಿಸಿದೆ. ಹೀಗಾಗಿ ಒಟ್ಟು ಶೇ.76ರಷ್ಟು ಷೇರಿನೊಂದಿಗೆ ಅದಾನಿ ಗ್ರೂಪ್ ಮಾಲೀಕತ್ವವನ್ನು ತನ್ನದಾಗಿಸಿಕೊಂಡಿದೆ.
ಅದಾನಿ ಗ್ರೂಪ್‌ಗೆ ಷೇರುಗಳ ಮಾರಾಟವನ್ನು ಜ.16ರಂದು ನಡೆದ ಸಭೆಯಲ್ಲಿ ಐಎಎನ್‌ಎಸ್ ಒಪ್ಪಿಕೊಂಡಿದೆ. ಕಳೆದ ವರ್ಷ ಡಿ.15ರಂದು ಅದಾನಿ ಗ್ರೂಪ್ ಐಎಎನ್‌ಎಸ್‌ನ ಶೇ.50.5ರಷ್ಟು ಷೇರನ್ನು ಖರೀದಿ ಮಾಡಿತ್ತು. ಐಎಎನ್‌ಎಸ್ 11 ಕೋಟಿ ರು. ಮೌಲ್ಯದ ಷೇರುಗಳನ್ನು ಹೊಂದಿದ್ದು, 2023ರಲ್ಲಿ ಇದರ ಲಾಭ 11.86 ಕೋಟಿ ರು.ನಷ್ಟಿತ್ತು.