ಮೋದಿ ಫ್ಯಾಸಿಸ್ಟ್‌ ಎಂದ ಗೂಗಲ್‌ ಜೆಮಿನಿ: ವಿವಾದ

| Published : Feb 24 2024, 02:32 AM IST / Updated: Feb 24 2024, 08:35 AM IST

gemini

ಸಾರಾಂಶ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಫ್ಯಾಸಿಸ್ಟ್‌ ಎಂದ ಗೂಗಲ್‌ ಜೆಮಿನಿ ಸಂಸ್ಥೆ ವಿವಾದ ಹುಟ್ಟುಹಾಕಿದೆ. ಇದು ಕಾನೂನು ಉಲ್ಲಂಘನೆ ಎಂದು ಸಚಿವ ಆರ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಪಿಟಿಐ ನವದೆಹಲಿ

ಗೂಗಲ್‌ ಕಂಪನಿಯ ಕೃತಕ ಬುದ್ಧಿಮತ್ತೆ ಟೂಲ್‌ ‘ಜೆಮಿನಿ’ ಇದೀಗ ವಿವಾದಕ್ಕೆ ಕಾರಣವಾಗಿದೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಫ್ಯಾಸಿಸ್ಟ್‌ ಹೌದೆ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ, ‘ಕೆಲವು ತಜ್ಞರ ಪ್ರಕಾರ ಹೌದು’ ಎಂದು ಜೆಮಿನಿ ಉತ್ತರಿಸಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ. 

ಗಮನಾರ್ಹ ಎಂದರೆ, ಇದೇ ಪ್ರಶ್ನೆಯನ್ನು ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಬಗ್ಗೆ ಕೇಳಿದಾಗ ಅದು ಯಾವುದೇ ನಿಖರ ಉತ್ತರ ನೀಡಿಲ್ಲ. ಈ ವಿಷಯ ಭಾರಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಕೇಂದ್ರ ಸರ್ಕಾರ ಹರಿಹಾಯ್ದಿದೆ. 

ಇದು ಮಾಹಿತಿ ತಂತ್ರಜ್ಞಾನ ನಿಯಮಗಳು ಹಾಗೂ ಕ್ರಿಮಿನಲ್‌ ಅಪರಾಧ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುವ ಸುಳಿವು ನೀಡಿದ್ದಾರೆ.