ರಾಜ್ಯಸಭಾ ಸಂಸದ ರಾಘವ್ ಚಡ್ಢಾ, ಆಪ್ ತೊರೆದು ಬಿಜೆಪಿ ಸೇರಿದ ಕೇವಲ 24 ಗಂಟೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಚಡ್ಢಾ ಬಿಜೆಪಿ ಸೇರ್ಪಡೆಯು ಜೆನ್ ಝೀಗಳನ್ನು ಆಕರ್ಷಿಸಲು ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನವದೆಹಲಿ: ರಾಜ್ಯಸಭಾ ಸಂಸದ ರಾಘವ್ ಚಡ್ಢಾ, ಆಪ್ ತೊರೆದು ಬಿಜೆಪಿ ಸೇರಿದ ಕೇವಲ 24 ಗಂಟೆಯಲ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 10 ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ, ಚಡ್ಢಾ ಬಿಜೆಪಿ ಸೇರ್ಪಡೆಯು ಜೆನ್ ಝೀಗಳನ್ನು ಆಕರ್ಷಿಸಲು ವಿಫಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಫಾಲೋವರ್‌ಗಳ ಸಂಖ್ಯೆ 1.35 ಕೋಟಿಗೆ ಇಳಿದಿದೆ
ಶುಕ್ರವಾರ ಚಡ್ಢಾರಿಗೆ ಇನ್‌ಸ್ಟಾದಲ್ಲಿ 1.46 ಕೋಟಿ ಫಾಲೋವರ್‌ಗಳಿದ್ದರು. ಶುಕ್ರವಾರವೇ ಅವರು ಆಪ್ ತೊರೆದು ಬಿಜೆಪಿ ಸೇರ್ಪಡೆಯಾದರು. ಶನಿವಾರ ಮಧ್ಯಾಹ್ನ 1 ಗಂಟೆಗೆ ಫಾಲೋವರ್‌ಗಳ ಸಂಖ್ಯೆ 1.35 ಕೋಟಿಗೆ ಇಳಿದಿದೆ. ಅಂದರೆ 24 ಗಂಟೆಗಳಲ್ಲಿ 10 ಲಕ್ಷ ಕಡಿಮೆಯಾಗಿದೆ.
ವೈರಲ್ ‘ಅನ್‌ಫಾಲೋ’ ಅಭಿಯಾನ
ಈ ಬಗ್ಗೆ ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗವಾಂಡೆ ಟ್ವೀಟ್ ಮಾಡಿದ್ದು, ‘ಇನ್‌ಸ್ಟಾಗ್ರಾಂನಲ್ಲಿ ಜೆನ್ ಝೀ ನಡೆಸಿದ ವೈರಲ್ ‘ಅನ್‌ಫಾಲೋ’ ಅಭಿಯಾನದಿಂದ ಚಡ್ಢಾ ಅವರ ಫಾಲೋವರ್‌ಗಳು 24 ಗಂಟೆಗಳಲ್ಲಿ 10 ಲಕ್ಷ ಕಡಿಮೆಯಾಗಿದ್ದಾರೆ. ಇಂಟರ್ನೆಟ್ ನಿಮ್ಮನ್ನು ಒಂದು ರಾತ್ರಿಯಲ್ಲಿ ಹೀರೋ ಮಾಡಬಲ್ಲುದು. ಅದೇ ಇಂಟರ್ನೆಟ್ ನಿಮ್ಮನ್ನು ಒಂದು ರಾತ್ರಿಯಲ್ಲಿ ಶೂನ್ಯಕ್ಕೆ ತಳ್ಳಬಲ್ಲದು’ ಎಂದಿದ್ದಾರೆ.
