ಸಾರಾಂಶ
ಇತ್ತೀಚೆಗೆ ಬಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರವನ್ನೇ ಉರುಳಿಸಿದ್ದ ಜೆನ್-ಝಿ ಪ್ರತಿಭಟನೆಯ ಕಿಚ್ಚು ಇದೀಗ ಮೆಕ್ಸಿಕೋಗೂ ಹರಡಿದೆ. ನ.1ರಂದು ನಡೆದ ಉರುಪನ್‌ನ ಮೇಯರ್ ಆಗಿದ್ದ ಮಾಂಜೊ ಅವರ ಹತ್ಯೆಯಿಂದ ಉದ್ರಿಕ್ತರಾಗಿರುವ ಯುವಕರು ಸರ್ಕಾರ ವಿರೋಧಿ ಪ್ರತಿಭಟನೆಗಿಳಿದಿದ್ದಾರೆ. ಇದಕ್ಕೆ ವಿಪಕ್ಷಗಳು ಮತ್ತು ಮಾಜಿ ಅಧ್ಯಕ್ಷರಿಂದ ಬೆಂಬಲ ವ್ಯಕ್ತವಾಗುತ್ತಿದೆ.
- ಅಪರಾಧ, ಭ್ರಷ್ಟಾಚಾರ ವಿರೋಧಿಸಿ ಭಾರೀ ಪ್ರತಿಭಟನೆ
- ಅಧ್ಯಕ್ಷೆ ನಿವಾಸಕ್ಕೆ ನುಗ್ಗಲೆತ್ನ । 100 ಪೊಲೀಸರಿಗೆ ಗಾಯಮೆಕ್ಸಿಕೋ ಸಿಟಿ: ಇತ್ತೀಚೆಗೆ ಬಾಂಗ್ಲಾದೇಶ, ನೇಪಾಳದಲ್ಲಿ ಸರ್ಕಾರವನ್ನೇ ಉರುಳಿಸಿದ್ದ ಜೆನ್-ಝಿ ಪ್ರತಿಭಟನೆಯ ಕಿಚ್ಚು ಇದೀಗ ಮೆಕ್ಸಿಕೋಗೂ ಹರಡಿದೆ. ನ.1ರಂದು ನಡೆದ ಉರುಪನ್‌ನ ಮೇಯರ್ ಆಗಿದ್ದ ಮಾಂಜೊ ಅವರ ಹತ್ಯೆಯಿಂದ ಉದ್ರಿಕ್ತರಾಗಿರುವ ಯುವಕರು ಸರ್ಕಾರ ವಿರೋಧಿ ಪ್ರತಿಭಟನೆಗಿಳಿದಿದ್ದಾರೆ. ಇದಕ್ಕೆ ವಿಪಕ್ಷಗಳು ಮತ್ತು ಮಾಜಿ ಅಧ್ಯಕ್ಷರಿಂದ ಬೆಂಬಲ ವ್ಯಕ್ತವಾಗುತ್ತಿದೆ. ‘ಮಾಂಜೊ ಸಾಯಲಿಲ್ಲ, ಅವರನ್ನು ಕೊಲ್ಲಲಾಯಿತು. ಭ್ರಷ್ಟಾಚಾರ ಮತ್ತು ಹಿಂಸಾತ್ಮಕ ಅಪರಾಧಗಳಿಗೆ ಶಿಕ್ಷೆಯ ವಿನಾಯಿತಿಯಂತಹ ವ್ಯವಸ್ಥಿತ ಸಮಸ್ಯೆಗಳಿಂದ ನಾವು ಹತಾಶರಾಗಿದ್ದೇವೆ. ನಮಗೆ ಭದ್ರತೆ ಬೇಕು ಹಾಗೂ ದೇಶ ಭ್ರಷ್ಟಾಚಾರ ಮುಕ್ತವಾಗಬೇಕು. ಆರೋಗ್ಯ ವ್ಯವಸ್ಥೆಗೆ ಇನ್ನಷ್ಟು ಅನುದಾನ ಸಿಗಬೇಕು’ ಎಂದು ಯುವಕರು ಆಗ್ರಹಿಸಿದ್ದಾರೆ. ಪ್ರತಿಭಟನಾಕಾರರು ಅಧ್ಯಕ್ಷೆಯ ನಿವಾಸಕ್ಕೂ ನುಗ್ಗಿದ್ದು, ಅವರನ್ನು ನಿಗ್ರಹಿಸಲು ಅಶ್ರುವಾಯು ಬಳಸಿದ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ. ಘಟನೆಯಲ್ಲಿ 100 ಪೊಲೀಸರು ಗಾಯಗೊಂಡಿದ್ದಾರೆ. 20 ನಾಗರಿಕರ ಸ್ಥಿತಿಯೂ ಗಂಭೀರವಾಗಿದ್ದು, 20 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.;Resize=(128,128))
;Resize=(128,128))